Breaking News
Oplus_131072

ಹಳೆಯ ಬಾಕಿ ಹಣ ಕೇಳಿದ್ದಕ್ಕೆ ಮೂರು ಜನರ ಗುಂಪಿನಿಂದ ಮಚ್ಚಿಯಿಂದ ಹಲ್ಲೆ!!

ಆರೋಪಿ ವಿಶ್ವನಾಥ್ ಎಂಬಾತ, ಕಳೆದ ಆರು ತಿಂಗಳುಗಳಿಂದ ಅಂಗಡಿಗೆ ಸುಮಾರು ₹1,500 ಬಾಕಿ ಇಟ್ಟುಕೊಂಡಿದ್ದ. ಈ ಮೊದಲು ಬಾಕಿ ಹಣ ಪಾವತಿಸದಿದ್ದರೂ, ಇದೀಗ ಮತ್ತೆ ಅಂಗಡಿಗೆ ಬಂದು ಹೊಸದಾಗಿ ಸಾಲ ಕೇಳಿದ್ದ. ಅಂಗಡಿಯ ಮಾಲಿಕ ಸಿದ್ದಲಿಂಗಯ್ಯ ಅವರು ಹಳೆಯ ಬಾಕಿಯ ಬಗ್ಗೆ ಕೇಳಿದಾಗ, ವಿಶ್ವನಾಥ್ ತನ್ನ ಜತೆಗೆ ಕಾರಿನಲ್ಲಿ ಇದ್ದ ಇಬ್ಬರೊಂದಿಗೆ ಇಳಿದು, ಮಾಲಿಕರ ಮೇಲೆ ಮಚ್ಚಿಯಿಂದ ಆಕ್ರೋಶದಿಂದ ದಾಳಿ ನಡೆಸಿದ್ದಾನೆ.ಮಾಲಿಕ ಸಿದ್ದಲಿಂಗಯ್ಯ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ನಡೆಸಿದ ಪ್ರಮುಖ ಆರೋಪಿ ವಿಶ್ವನಾಥ್ ಸೇರಿದಂತೆ ಮೊವರ ವಿರುದ್ಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *