ದೇಶದ ಆಸ್ಥಿತೆಯನ್ನು ಬಡಿದೆಬ್ಬಿಸಿರುವ ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಹೇಯ ಕೃತ್ಯಕ್ಕೆ ಕೈಜೋಡಿಸಿದ ಹಿನ್ನಲೆಯಲ್ಲಿ ಇಬ್ಬರು ಉಗ್ರರ ಮನೆಗಳನ್ನು ನೆಲಸಮಗೊಳಿಸಲಾಗಿದೆ.ಒಂದು ಮೂಲದ ಪ್ರಕಾರ ಶಂಕಿತ ಉಗ್ರರ ಮನೆಗಳಲ್ಲಿ ಶೋಧ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಮನೆ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.
ಮನೆಯೊಳಗಿದ್ದ ಸ್ಫೋಟಕ ವಸ್ತು ಏಕಾಏಕಿ ಅನುಮಾನಸ್ಪದವಾಗಿ ಸ್ಫೋಟಗೊಂಡ ಕಾರಣ ಈ ಘಟನೆ ಸಂಭವಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸೇನಾ ಮೂಲಗಳು ಹೇಳುವ ಪ್ರಕಾರ ಕಳೆದ ಮಂಗಳವಾರ ಪಹಲ್ಯಾಮ್‌ನಲ್ಲಿ ಸಂಭವಿಸಿದ ಭಯೋತ್ಪಾದಕರ ದಾಳಿಗೆ ಈ ಇಬ್ಬರು ಉಗ್ರರು ಕೈ ಜೋಡಿಸಿದ್ದರು ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

