Breaking News

ಸಾಲ ಮರಳಿ ಕೇಳಿದ್ದಕ್ಕೆ ಕಿಡ್ನಾಪ್‌ ಮಾಡಿದ ಕಿರಾತಕರು;

ಕಲಬುರಗಿ ; ಸಾಲ ಮರಳಿ ಕೇಳಿದ ಮಹಿಳೆಯನ್ನೇ ಸಿನಿಮೀಯ ಶೈಲಿಯಲ್ಲಿ ಶಾಲಾ ಶಿಕ್ಷಕಿ ಕಿಡ್ನಾಪ್ ಮಾಡಿಸಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಹಣೆಗೆ ಪಿಸ್ತೂಲ್ ಇಟ್ಟು ಹೆದರಿಸಿ ಕಾರ್ ನಲ್ಲಿ ಮಹಿಳೆಯ ಕಿಡ್ನಾಪ್ ಮಾಡಲಾಗಿತ್ತು ಎನ್ನಲಾಗಿದೆ. ಈ ವೇಳೆ‌ ಕಿಡ್ನಾಪರ್ ಕಾರ್ ನ್ನು ಕಿಡ್ನಾಪ್ ಆದ ಮಹಿಳೆಯ ಮಕ್ಕಳು ಅಡ್ಡಗಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಕಲಬುರಗಿ ನಗರದ ಹೈಕೋರ್ಟ್ ರಿಂಗ್ ರಸ್ತೆಯಲ್ಲಿ ಎರಡೂ ಗುಂಪುಗಳ ನಡುವೆ ರಾದ್ದಾಂತ ನಡೆದಿತ್ತು. ಈ ವೇಳೆ ಗಲಾಟೆ ಬಿಡಿಸಲು ಸ್ಥಳಕ್ಕೆ ಪೊಲೀಸರ ಬಂದ ನಂತರ ಕಿಡ್ನ್ಯಾಪ್ ಕತೆ ಪೊಲೀಸರಿಗೆ ಗೊತ್ತಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಕಿಡ್ನಾಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌. ಬಂಧಿತರಿಂದ ಒಂದು ಪಿಸ್ತೂಲು ಮತ್ತು ಹದಿನೆಂಟು ಜೀವಂತ ಗುಂಡುಗಳು ವಶಕ್ಕೆ ಪಡೆಯಲಾಗಿದೆ. ಇನ್ನೂ ಅಪಹರಣಕ್ಕೊಳಗಾಗಿದ್ದ ಸಾವಿತ್ರಿ ಕಲಶೆಟ್ಟಿ ಎನ್ನುವ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಈ ವೇಳೆ ವಿಷಯ ಪ್ರಸ್ತಾಪಿಸಿದ ಮಹಿಳೆ, ಶ್ರೀನಿವಾಸ ಸರಡಗಿ ಶಾಲೆಯ ಶಿಕ್ಷಕಿ ಮಂಗಳ ಎನ್ನುವವರಿಗೆ 20 ಲಕ್ಷ ರೂ. ಸಾಲ ಕೊಟ್ಟಿದ್ದರು ಎನ್ನಲಾಗಿದೆ. ಈ ಕೊಟ್ಟ ಹಣ ಕೇಳಲು ಶಾಲೆಗೆ ಹೋದಾಗ ತನ್ನ ಪರಿಚಿತರನ್ನು ಫೋನ್ ಮಾಡಿ ಕರೆಸಿ ಕಿಡ್ನಾಪ್ ಮಾಡಿಸಿದ್ದಾಗಿ ಸಾವಿತ್ರಿ ಹೇಳಿದ್ದಾರೆ. ಕಿಡ್ನಾಪ್ ಆರೋಪಿಗಳಾದ ಮಂಗಳಾ, ದಯಾನಂದ ಹೂಗಾರ್, ರಾಜಕುಮಾರ್ ಪಾಟೀಲ್, ನಬಿಸಾಬ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *