ಮಧುಸೂದನ್ ಆನ್ಲೈನ್ ಬೆಟ್ಟಿಂಗ್ ಸೇರಿದಂತೆ ಹಲವು ವ್ಯಕ್ತಿಗಳಿಂದ ಸಾಲ ಮಾಡಿದ್ದು, ಸಾಲ ವಾಪಸ್ ಪಡೆಯಲು ಸಾಲಕೊಟ್ಟವರು ಮನೆಗೆ ಬಂದು ನಿಂದಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾದ ಮಧುಸೂದನ್, ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮೊದಲು ಪತ್ನಿಗೆ ವಾಟ್ಸ್‌ಅಪ್ ಮೂಲಕ ‘ಮನೆಗೆ ಬೇಗ ಬಾ’ ಎಂದು ಸಂದೇಶ ಕಳುಹಿಸಿದ್ದರು. ಮನೆಗೆ ಬಂದ ಪತ್ನಿ ಕಿಟಕಿಯ ಮುಖಾಂತರ ನೋಡಿದಾಗ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬಾಗಿಲು ಮುರಿದು ಒಳ ಪ್ರವೇಶಿಸಿ ಶವವನ್ನು ಹೊರತೆಗೆಯಲಾಯಿತು.
ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪತ್ನಿಗೆ ಹಸ್ತಾಂತರಿಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

