Breaking News

ಕುಡುಕನ ಅವಾಂತರ: ಕಂಠಪೂರ್ತಿ ಕುಡಿದು ಆಂಬುಲೆನ್ಸ್ ಗೆ ಕರೆ ಮಾಡಿ ಚೇಷ್ಟೆ ಮಾಡಿದ ಕುಡುಕ.

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಬಾಳೆಹೊನ್ನೂರಿನಲ್ಲಿರುವ ಆಯಂಬುಲೆನ್ಸ್ ಗೆ ಕರೆ ಮಾಡಿ ಶೃಂಗೇರಿಯಲ್ಲಿ ಗಲಾಟೆಯಾಗಿ ನನಗೆ ತುಂಬಾ ಪೆಟ್ಟಾಗಿದೆ ಕೂಡಲೇ ಬನ್ನಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಕರೆ ಮಾಡಿದ್ದಾನೆ, ಮಾಹಿತಿ ಪಡೆದ ಆಯಂಬುಲೆನ್ಸ್ ಚಾಲಕ 40 ಕಿಲೋಮೀಟರ್ ದೂರದಲ್ಲಿರುವ ಬಾಳೆಹೊನ್ನೂರಿನಿಂದ ಶೃಂಗೇರಿಗೆ ಬಂದಿದ್ದಾನೆ, ಆಯಂಬುಲೆನ್ಸ್ ನೋಡುತ್ತಿದ್ದಂತೆ ನನಗೇನು ಆಗಿಲ್ಲ ನಿಮಗೆ ಸಾಧ್ಯವಾದರೆ ನನ್ನನ್ನು ಹಿಡಿಯಿರಿ ನೋಡೋಣ ಎಂದು ಹೇಳಿದ್ದಾನೆ.ಪೊಲೀಸರು ಕುಡುಕನನ್ನು ಹಿಡಿಯಲು ಹರಸಾಹಸ ಪಟ್ಟಿದ್ದು ಕೊನೆಗೆ ಸ್ಥಳೀಯರು ಕುಡುಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಪೊಲೀಸರ ಕೈಗೆ ಸಿಗುತಿದ್ದಂತೆ ತಪ್ಪಾಯ್ತು ಸರ್, ಬಿಟ್ಟು ಬಿಡಿ ಸರ್ ಎಂದು ಗೋಗರೆದಿದ್ದಾನೆ. ಘಟನೆ ಗುರುವಾರ ತಡರಾತ್ರಿ ಶೃಂಗೇರಿಯಲ್ಲಿ ನಡೆದಿದೆ

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *