Breaking News

ಸಂತೋಷ್ ಲಾಡ್ ಪಹಲ್ಗಾಮ ಘಟನೆ ಬಗ್ಗೆ ವಾಗ್ದಾಳಿ!!

ಕಾರ್ಮಿಕ ಸಚಿವ ಸಂತೋಷ್ ಲಾಡ್ ಸುದ್ದಿಗೋಷ್ಟಿ ಮಾತನಾಡಿದ ಅವರು ಒಂದಿಷ್ಟು ಪ್ರಶ್ನೆಗಳನ್ನು ಹಂಚಿಕೊಂಡಿದ್ದಾರೆ. ದಾಳಿ ಬಗ್ಗೆ ಯಾರೂ ಚರ್ಚೆ ಮಾಡ್ತಿಲ್ಲ ಯಾಕೆ..? ಯಾಕೆ ಮೆರವಣಿಗೆ ಮಾಡ್ತೀರ,? ಹೆಜ್ಜೆ ಹೆಜ್ಜೆಗೂ ಚೆಕ್‌ಪೋಸ್ಟ್ ಇದೆ ಒಬ್ಬ ಸೆಕ್ಯೂರಿಟಿನೂ ಇಲ್ಲ ಯಾಕೆ..? ಅವರು ಹೇಗೆ ಬಂದ್ರು ಅದರ ಬಗ್ಗೆ ಚರ್ಚೆ ಮಾಡ್ತಿಲ್ಲ ಯಾಕೆ..? ಎಂದು ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಹಾಕಿದ್ದಾರೆ.
20 ರಾಜ್ಯಗಳಲ್ಲಿ ನೀವೆ ಸಿಎಂ, ನೀವೆ ಪಿಎಂ
ಬರೀ ಹಿಂದೂ ಮುಸ್ಲಿಂ ಬಿಟ್ರೆ ಬೇರೆ ಏನೂ ಇಲ್ಲ. ಇಡೀ ದೇಶಕ್ಕೆ ಗೊತ್ತಿದೆ ಪ್ರವಾಸಿಗರಿಗೆ ಆಗಿದ್ದು ಭಯಾನಕ ಘಟನೆ. ಇದರ ಬಗ್ಗೆ
ರಾಜಕೀಯ ಮಾತನಾಡಬಾರದು ಅಂದುಕೊಂಡಿದ್ದೇವೆ, ಆದರೆ ಕೆಲವಾರು ಪ್ರಶ್ನೆ ನಮ್ಮನ್ನ ಕಾಡುತ್ತಿವೆ. ಇಂತಹ ಘಟನೆಗಳು ನಡೆದಾಗ ಯಾವ ಕೇಂದ್ರ ಸಚಿವರು ಪ್ರತಿಕ್ರಿಯೆ ನೀಡಲ್ಲ. ನೇರವಾಗಿ ಬಂದು ಉತ್ತರ ಕೊಟ್ಟಿರೋದು ಬೆರಳೆಣಿಕೆಯಷ್ಟು. ಕೇವಲ ಸ್ಟುಡಿಯೋಗಳಲ್ಲಿ ಪರ ವಿರೋದ ಚರ್ಚೆಗಳು ಆಗ್ತಿವೆ ,ಕೇಂದ್ರ ಸರ್ಕಾರದಲ್ಲಿ ಆದ ವೈಫಲ್ಯದ ಬಗ್ಗೆ ಯಾರೂ ಮಾತನಾಡ್ತಿಲ್ಲ.
ಮಾದ್ಯಮಗಳಂತೂ ಕೇಂದ್ರ ಗೃಹ ಸಚಿವರ ರಾಜಿನಾಮೆ ಕೇಳ್ತಿಲ್ಲ,ನಮ್ಮ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ‌ಕೇಳ್ತಿದ್ದಾರೆ. ಯಾರೂ ಗೃಹ ಸಚಿವರ ರಾಜೀನಾಮೆ ಕೇಳ್ತಿಲ್ಲ. ಶ್ರೀನಗರದಲ್ಲಿ ಒಂದು ಹುಳನೂ ತಪ್ಪಿಸಿಕೊಂಡು ಹೋಗೋಕೆ ಆಗಲ್ಲ,ಗೃಹ ಸಚಿವರನ್ನ ಕೇಳ್ತೇನೆ, ಬೇರೆದಕ್ಕೆಲ್ಲ
ಮಾತಿಗೆ ಮುನ್ನ ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಿಂದೂ ಮುಸ್ಲಿಂ ಅಂತಾರೆ. ಹಾಗಾದ್ರೆ ನಿಮ್ಮ ಅವಧಿಯಲ್ಲಿ ಹಿಂದೂಗಳಿಗೆ ಅನ್ಯಾಯ ಆಯ್ತು ಅಂತ ಒಪ್ಪಿಕೊಳ್ಳಿ.ಇಂತಹ ದೊಡ್ಡ ಘಟನೆ ನಡೆದರೂ ಪ್ರಧಾನಿ ಮೋದಿ ಬಿಹಾರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸ್ತಾರೆ.ಕೇಂದ್ರ ಸರ್ಕಾರದ ವಿರುದ್ದ ಸಚಿವ ಸಂತೋಷ್ ಲಾಡ್ ಕಿಡಿಕರಿದ್ದಾರೆ. ಇವರೆ ಆರ್ಟಿಕಲ್ 370 ಮಾಡಿದ್ರು, ಎಲ್ಲಾ ನಮ್ಮ ಕಂಟ್ರೋಲ್‌ನಲ್ಲೇ ಇದೆ ಅಂದ್ರು,ನಾನು ನೋಡಿದಂತೆ ನಮಗಿಂತ ಹೆಚ್ಚಾಗಿ ಅಲ್ಲಿನ ಜನ ರಕ್ತ ಕಣ್ಣೀರು ಹಾಕ್ತಿದ್ದಾರೆ. ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *