Breaking News

ಅಹ್ಮದಾಬಾದ್ :ಅಗ್ನಿ ಅವಘಡ, ಜೀವ ಉಳಿಸಿಕೊಳ್ಳಲು 5ನೇ ಅಂತಸ್ತಿನಿಂದ ಹಾರಿದ ಯುವತಿ!!

ಅಹ್ಮದಾಬಾದ್ ನ ಇಂದಿರಾ ಸೇತುವೆ ಪ್ರದೇಶದ ಆಟ್ರೆ ಆರ್ಕಿಡ್‌ನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ್ಟ್‌ಮೆಂಟ್ ಬೆಂಕಿಯಿಂದ ತಪ್ಪಿಸಿಕೊಳ್ಳಲು ಅಹ್ಮದಾಬಾದ್‌ನ ಐದನೇ ಮಹಡಿಯ ಕಟ್ಟಡದಿಂದ ಜಿಗಿದ ಯುವತಿಯೊಬ್ಬಳು ಬದುಕುಳಿದಿದ್ದಾಳೆ.ಇನ್ನು ಅಗ್ನಿ ಅವಘಡ ಕುರಿತು ಮಾಹಿತಿ ಲಭ್ಯವಾಗುತ್ತಲೇ ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದರು. ಅಪಾರ್ಟ್ಮೆಂಟ್ನ ‘ಸಿ’ ಮತ್ತು ‘ಡಿ’ ಬ್ಲಾಕ್ ನಲ್ಲಿ ಬೆಂಕಿ ವ್ಯಾಪಕವಾಗಿ ಹಬ್ಬಿತ್ತು. ಮೂಲಗಳ ಪ್ರಕಾರ ಅಪಾರ್ಟ್ ಮೆಂಟ್ ನ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು ಬಳಿಕ ಬೆಂಕಿ ಕಟ್ಟಡದ ಇತರೆ ಭಾಗಕ್ಕೆ ವ್ಯಾಪಿಸಿಕೊಂಡಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *