Breaking News
Oplus_131072

ಬೆಂಗಳೂರು : ಪತಿ ಕೊಲೆಗೆ ಸುಪಾರಿ, ಪತ್ನಿ ಸೇರಿ ಏಳು ಮಂದಿ ಬಂಧನ!!

ಪ್ರಿಯಕರ ನಾಗರಾಜ್ ಜತೆ ವನಜಾಕ್ಷಿ ಸಲುಗೆಯಿಂದ ಇದ್ದರು. ಈ ವಿಷಯ ಗೊತ್ತಾಗಿ ಚಂದ್ರಶೇಖರ್ ಬುದ್ದಿ ಹೇಳಿದ್ದರು. ಹಾಗಾಗಿ ಪತಿಯ ಹತ್ಯೆ ಮಾಡಲು ವನಜಾಕ್ಷಿ ತನ್ನ ಪ್ರಿಯಕರನಿಗೆ ₹ 1 ಲಕ್ಷ ಸುಪಾರಿ ನೀಡಿದ್ದಳು. ಏಪ‍್ರಿಲ್ 26ರಂದು ಚಂದ್ರಶೇಖರ್‌ನನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಬ್ ಚಾಲಕನಾಗಿದ್ದ ಚಿಕ್ಕಬ್ಯಾಲಕೆರೆಯ ಚಂದ್ರು, 15 ವರ್ಷಗಳ ಹಿಂದೆ ವನಜಾಕ್ಷಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಾಗರಾಜ್‌ನಿಂದ ದೂರವಿರುವಂತೆ ಪತ್ನಿಗೆ ಬುದ್ದಿ ಹೇಳುತ್ತಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಪತಿ ಜತೆ ಜಗಳವಾಡಿಕೊಂಡು, ದೊಡ್ಡಬ್ಯಾಲಕೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ತನ್ನ ತಾಯಿ ಜತೆ ವನಜಾಕ್ಷಿ ವಾಸವಿದ್ದಳು ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ಚಂದ್ರು ಪತ್ನಿ ವನಜಾಕ್ಷಿ, ಪ್ರಿಯಕರ ನಾಗರಾಜ್, ಮೈಸೂರಿನ ಪುರುಷೋತ್ತಮ್, ಮಂಡ್ಯದ ನಂದನ್ ಹಾಗೂ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *