2 ತಿಂಗಳ ಸಾಲ ಕಟ್ಟದ ಹಿನ್ನೆಲೆ ಬ್ಯಾಂಕ್ ನಿಂದ ನೋಟಿಸ್ ಬಂದಿತ್ತು. ಸಾಲದ ಒತ್ತಡದಿಂದ ದೇವರಾಜ್ ಮನನೊಂದು ಬಾಡಿಗೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತನನ್ನು ಕಲಬುರಗಿ ಮೂಲದ 21 ವರ್ಷದ ದೇವರಾಜ್ (21) ಎಂದು ಗುರುತಿಸಲಾಗಿದೆ. ದೇವರಾಜ್ ಕಳೆದ ವರ್ಷ ಕಷ್ಟಪಟ್ಟು ಕಾರು ಖರೀದಿಸಿದ್ದರು. ಆದರೆ ಅದರ ಇಎಂಐ ಪಾವತಿ ಮಾಡುವುದಕ್ಕೆ ಅದನ್ನು ಬಾಡಿಗೆಗೆ ನೀಡುವ ಯೋಜನೆ ಮಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಹೆಚ್ಚಿನ ಬಾಡಿಗೆ ಸಿಗದೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

