Breaking News

ಬೆಂಗಳೂರು: ರಸ್ತೆ ಅಪಘಾತ, ದಲಿತ ನಾಯಕ ಬಿ. ಚನ್ನಕೃಷ್ಣಪ್ಪ ಮೃತ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಚನ್ನಕೃಷ್ಣಪ್ಪ ಅವರು ಕೆಲಸದ ನಿಮಿತ್ತ ಸ್ನೇಹಿತರ ಜೊತೆ ಬಾಗೇಪಲ್ಲಿಗೆ ಹೋಗಿದ್ದರು.ರಾಷ್ಟ್ರೀಯ ಹೆದ್ದಾರಿ 44ರ ವರ್ಲಕೊಂಡ ಬಳಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಘಟಕ ಅಧ್ಯಕ್ಷ ಬಿ. ಚನ್ನಕೃಷ್ಣಪ್ಪ ಮೃತಪಟ್ಟಿದ್ದಾರೆ. ಅಂಬೇಡ್ಕರ್ ಅವರು ಸ್ಥಾಪಿಸಿದ್ದ ಸಮತಾ ಸೈನಿಕ ದಳವನ್ನು ಕರ್ನಾಟಕದಲ್ಲಿ ಕಟ್ಟಲು ಅವರು ಶ್ರಮಿಸಿದ್ದಲ್ಲದೇ, ಎಲ್ಲ ಜಿಲ್ಲೆಗಳಲ್ಲೂ ಅದರ ಘಟಕವನ್ನು ರಚನೆ ಮಾಡಲು ಪ್ರೇರಣೆಯಾಗಿದ್ದರು. ಅಂಬೇಡ್ಕರ್ ಸ್ಪೂರ್ತಿ ಸೌಧ ನಿರ್ಮಾಣಕ್ಕಾಗಿ ಹತ್ತು ವರ್ಷಗಳು ಹೋರಾಟ ನಡೆಸಿದರು. ಸಮಾಜ ಕಲ್ಯಾಣ ಇಲಾಖೆಯ ಎಲ್ಲ ಅಧಿಕಾರಿಗಳು ಸ್ಪೂರ್ತಿ ಸೌಧದಲ್ಲಿ ಸಿಗಬೇಕೆಂಬುದು ಚನ್ನಕೃಷ್ಣಪ್ಪ ಅವರ ಉದ್ದೇಶ ಆಗಿತ್ತು.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *