ಬೆಳಗಾವಿ: ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆಗಳು ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಮೂರು ದಿನಗಳಿಂದ ಕಬ್ಬು ಬೆಳೆಗಾರರು ತೀವ್ರ ಹೋರಾಟ ನಡೆಸಿದ್ದಾರೆ. ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಪಡೆದುಕೊಂಡು ಬೆಳಗಾವಿಯಿಂದ ಬೆಂಗಳೂರಿನ ಫ್ರೀಡಂಫಾರ್ಕ್ವರಗೆ ರೈತರು ಹೋರಾಟ ನಡೆಸಿ, ಕಬ್ಬು ಬೆಳೆ ಬಾಕಿ ಹಣ ವಾಪಸ್ಸು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.ಇನ್ನ, ರೈತರಿಗೆ ಯಾವ ಯಾವ ಸಕ್ಕರೆ ಕಾರ್ಖಾನೆಯಿಂದ ಎಷ್ಟು ಹಣ ಬಾಕಿ ಇದೆ. ಕಾರ್ಖಾನೆ ಯಾರಿಗೆ ಸೇರಿದ್ದು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಒಟ್ಟು 26 ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ಬಾಕಿ ಹಣ ಬರಬೇಕಿದೆ. ಅವುಗಳ ವಿವರ ಇಲ್ಲಿದೆ.ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಎಂ. ಕೆ. ಹುಬ್ಬಳ್ಳಿ- ₹ 18.60 ಕೋಟಿ -ಸಹಕಾರಿ ಸಕ್ಕರೆ ಕಾರ್ಖಾನೆಶ್ರೀ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ, ಹಿರೇನಂದಿಹಳ್ಳಿ, ಗೋಕಾಕ ತಾಲೂಕು- ₹20.00 ಕೋಟಿ. ಮಾಲೀಕರು ಸಚಿವ ರಮೇಶ ಜಾರಕಿಹೊಳಿಸತೀಶ್ ಶುಗರ್ಸ್, ಪಿ. ಜಿ. ಹುಣಶ್ಯಾಳ- ₹30.00 ಕೋಟಿ- ಮಾಲೀಕರು ಸತೀಶ್ ಜಾರಕಿಹೊಳಿ, ಶಾಸಕಬೆಳಗಾವಿ ಶುಗರ್ಸ್, ಹುದಲಿ- ₹ 12.00 ಕೋಟಿ- ಮಾಲೀಕರು ಸತೀಶ್ ಜಾರಕಿಹೊಳಿ, ಶಾಸಕಶಿವಸಾಗರ ಅಗ್ರೊ, ಉದಪುಡಿ, ರಾಮದುರ್ಗ- ₹ 24.00ಕೋಟಿ- ಖಾಸಗಿಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಗೋಕಾಕ- ₹4.00 ಕೋಟಿ- ಸಹಕಾರಿ ಸಕ್ಕರೆ ಕಾರ್ಖಾನೆ- ಮಾಲೀಕರು ಬಾಲಚಂದ್ರ ಜಾರಕಿಹೊಳಿ ಹಿಡಿತದಲ್ಲಿ ಇರೋ ಕಾರ್ಖಾನೆರೇಣುಕಾ ಶುಗರ್ಸ್ ಮುನವಳ್ಳಿ- ₹ 10.00 ಕೋಟಿ- ಮಾಲೀಕರು ಉದ್ಯಮಿ ವಿದ್ಯಾ ಮುರುಕುಂಬಿ ಒಡೆತನದ ಕಾರ್ಖಾನೆಸಮೀರವಾಡಿ ಸಕ್ಕರೆ ಕಾರ್ಖಾನೆ, ಸೈದಾಪುರ- ₹ 10.00ಕೋಟಿ- ಖಾಸಗಿವಿಶ್ವನಾಥ ಶುಗರ್ಸ್, ಬೆಲ್ಲದ ಬಾಗೇವಾಡಿ- ₹ 15.00ಕೋಟಿ- ಮಾಲೀಕರು ಉಮೇಶ ಕತ್ತಿ, ಬಿಜೆಪಿ ಶಾಸಕಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಸಂಜೇಶ್ವರ- ₹ 10.00 ಕೋಟಿ- ಸಹಕಾರಿಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ, ನಿಪ್ಪಾಣಿ- ₹ 8.00 ಕೋಟಿ- ಖಾಸಗಿಲೈಲಾ ಶುಗರ್ಸ್, ಖಾನಾಪುರ- ₹6.00 ಕೋಟಿ- ವಿಠ್ಠಲ್ ಹಲೇಗರಕ್ ಬಿಜೆಪಿ ಮುಖಂಡಪ್ಯಾರಿ ಶುಗರ್ಸ್, ರಾಮದುರ್ಗ- ₹15.00 ಕೋಟಿ- ಖಾಸಗಿಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ, ಬೈಲಹೊಂಗಲ- ₹13.00 ಕೋಟಿ- ಖಾಸಗಿಇಂಡಿಯನ್ ಕೇನ್ ಪವರ್ ಲಿ, ಉತ್ತೂರು, ಯಾದವಾಡ- ₹ 40.00 ಕೋಟಿ- ಖಾಸಗಿನಿರಾಣಿ ಶುಗರ್ಸ್- 2016-17ರಲ್ಲಿ ₹17.12 ಕೋಟಿ, ಹಾಗೂ 2017-18ರಲ್ಲಿ 28.12 ಕೋಟಿ- ಮಾಲೀಕರು ಮುರಗೇಶ್ ನಿರಾಣಿಬೀಳಗಿ ಶುಗರ್ಸ್, 2017-18ರಲ್ಲಿ 9.72 ಕೋಟಿ, ಮಾಲೀಕರು, ಎಸ್.ಆರ್. ಪಾಟೀಲ್ಇಂಡಿಯನ್ ಕೇನ್ ಪಾವರ್, ಉತ್ತೂರು, 2017-18ರಲ್ಲಿ 18.18 ಕೋಟಿ, ಮಾಲೀಕರು ಶಾಮನೂರು ಶಿವಶಂಕ್ರಪ್ಪಗೋದಾವರಿ ಸಮೀರವಾಡಿ ಶುಗರ್ಸ್- 2017-18ರಲ್ಲಿ 35.18 ಕೋಟಿಪ್ರಭುಲಿಂಗೇಶ್ವರ ಶುಗರ್ಸ್, 2016-17ರಲ್ಲಿ 19.52 ಕೋಟಿ, 2017-18ರಲ್ಲಿ 24.83 ಕೋಟಿ, ಮಾಲೀಕರು ಸಿಸ್ಮಾ ಅಧ್ಯಕ್ಷಜಮಖಂಡಿ ಶುಗರ್ಸ್, 2017-18ರಲ್ಲಿ 17.46 ಕೋಟಿ, ಮಾಲೀಕರು ಆನಂದ್ ನ್ಯಾಮಗೌಡ, ಶಾಸಕಜೆಮ್ ಶುಗರ್ಸ್ ಕುಂದರಗಿ, 2016-17ರಲ್ಲಿ 12.31 ಕೋಟಿ, 2017-18ರಲ್ಲಿ 18.90 ಕೋಟಿಸಾಯಿ ಪ್ರಿಯಾ ಶುಗರ್ಸ್, 2017-18ರಲ್ಲಿ 18.11 ಕೋಟಿರನ್ನ ಶುಗರ್ಸ್, 2016-17ರಲ್ಲಿ 2.88 ಕೋಟಿ, 2017-18ರಲ್ಲಿ 7.73 ಕೋಟಿಸಾವರಿನ್ ಶುಗರ್ಸ್, ಶೇಗುನಸಿ, 2017-18ರಲ್ಲಿ 9.8 ಕೋಟಿಸದಾಶಿವ ಶುಗರ್ಸ್ 2016-17ರಲ್ಲಿ 13.88 ಕೋಟಿ
bigtvnews | Hubli Dharwad News | Kannada News | Karnataka News Hubli News | News In Hubli | Local news





