Breaking News

ವೆಸ್ಟರ್ನ್ ಟಾಯ್ಲೆಟ್‌ ಸೀಟ್ ಸ್ಫೋಟ: ಯುವಕನಿಗೆ ಗಂಭೀರ ಗಾಯ!

ಶೌಚಾಲಯದ ವೆಸ್ಟರ್ನ್ ಟಾಯ್ಲೆಟ್ ಸೀಟ್ ಸ್ಫೋಟಗೊಂಡು 20 ವರ್ಷದ ಯುವಕನಿಗೆ ಗಂಭೀರ ಗಾಯಗಳಾಗಿವೆ.ಗ್ರೇಟರ್ ನೋಯ್ಡಾದ ಸೆಕ್ಟರ್-36ನ ಮನೆ ಸಂಖ್ಯೆ C-364ರಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮನೆಯ ಮಾಲೀಕ ಸುನಿಲ್ ಪ್ರಧಾನ್ ಅವರ 20 ವರ್ಷದ ಮಗ ಆಶು ನಗರ್ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೌಚಾಲಯದಲ್ಲಿದ್ದರು. ಮಲವಿಸರ್ಜನೆಯ ನಂತರ ತೊಳೆಯುವ ಸಂದರ್ಭದಲ್ಲಿ, ವೆಸ್ಟರ್ನ್ ಟಾಯ್ಲೆಟ್ ಸೀಟ್ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಈ ಸ್ಫೋಟದಿಂದ ಆಶು ಅವರ ಮುಖ, ಕೈಗಳು, ಕಾಲುಗಳು ಮತ್ತು ಖಾಸಗಿ ಭಾಗಗಳು ಸುಟ್ಟುಹೋಗಿವೆ.ಸ್ಫೋಟದ ಶಬ್ದ ಕೇಳಿ ಕುಟುಂಬ ಸದಸ್ಯರು ಶೌಚಾಲಯಕ್ಕೆ ಧಾವಿಸಿದರು. ಆಶು ಅವರನ್ನು ಬೆಂಕಿಯಿಂದ ರಕ್ಷಿಸಿ, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣವೇ ಗ್ರೇಟರ್ ನೋಯ್ಡಾದ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಸ್ಫೋಟಕ್ಕೆ ಮೀಥೇನ್ ಅನಿಲ ಸೋರಿಕೆ ಕಾರಣವಿರಬಹುದು ಎಂದು ಶಂಕಿಸಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *