ಸರಗೂರು ಗ್ರಾಮದ ಮರಿನಂಜಮ್ಮ ಅವರ ಬಾಳೆ ತೋಟಕ್ಕೆ ಗುರುವಾರ ಮಧ್ಯಾಹ್ನ ಬೆಂಕಿ ಬಿದ್ದು ನಾಲ್ಕೂವರೆ ಎಕರೆಯಲ್ಲಿ ಬೆಳೆದಿದ್ದ ಬಾಳೆಯಲ್ಲಿ ಒಂದೂವರೆ ಎಕರೆ ಬಾಳೆ, 5 ತೆಂಗು ಹಾಗೂ ಹನಿ ನೀರಾವರಿ ಪೈಪ್ ಸುಟ್ಟು ಹೋಗಿವೆ.ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.ಬೆಳಕವಾಡಿ ಸಮೀಪದ ಸರಗೂರಿನಲ್ಲಿ ಬಾಳೆ ತೋಟಕ್ಕೆ ಹೊತ್ತಿಕೊಂಡು ಅಗ್ನಿಶಾಮಕ ದಳದವರು ನಂದಿಸಿದರು.
