Breaking News

ಗೌರಿಬಿದನೂರು :ಕೆರೆ ಜಾಗ ಮಾರಾಟಕ್ಕೆ ಯತ್ನ,ಗ್ರಾಮಸ್ಥರ ವಿರೋಧ!

ಗ್ರಾಮದ ಜನರಿಗೆ ಕುಡಿಯುವ ನೀರಿಗಾಗಿ ಸರ್ಕಾರದಿಂದ ಎಂಟು ಕೊಳವೆ ಬಾವಿ ಕೊರೆಸಲಾಗಿದೆ. ಕೆರೆಯ ಕೋಡಿಯನ್ನು ಸಹ ಸರ್ಕಾರದಿಂದಲೇ ನಿರ್ಮಾಣ ಮಾಡಲಾಗಿದೆ. ₹20 ಲಕ್ಷ ನರೇಗಾ ಕಾಮಗಾರಿಯು ನಡೆದಿದೆ. ಇತ್ತೀಚೆಗೆ ಜಲ ಜೀವನ್ ಯೋಜನೆ ಅಡಿಯಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಇಷ್ಟ ಸರ್ಕಾರ ಕಾಮಗಾರಿ ನಡೆದಿರುವ ಜಾಗವನ್ನು ಕೆಲವರು ತಮ್ಮದೆಂದು ಮಾರಾಟಕ್ಕೆ ಯತ್ನಿಸಿರುವುದು ಅಪರಾಧ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಾಂತರಾಜು ದೂರಿದರು.ಕೆರೆಯಲ್ಲಿ ಸರ್ವೆ ನಂಬರ್ 22, 23,24,25 ಖಾಸಗಿ ಖಾತೆದಾರರ ಹೆಸರಿನಲ್ಲಿ ಬರುತ್ತಿರುತ್ತವೆ. ಕೆಲವು ಖಾಸಗಿ ವ್ಯಕ್ತಿಗಳು ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿ ಕೊಡಬೇಕು ಎಂದು ಒತ್ತಾಯಿಸಿದರು.ತಾಲ್ಲೂಕಿನ ಹೊಸೂರು ಹೋಬಳಿಯ ಬಳಗೆರೆ ಗ್ರಾಮದ ಕೆರೆಯ ಜಾಗವನ್ನು ಮಾರಾಟಕ್ಕೆ ಯತ್ನಿಸಿದ ಕೆಲವು ಖಾಸಗಿ ವ್ಯಕ್ತಿಗಳ ವಿರುದ್ಧ ಗುರುವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *