Breaking News

73 ವಿಕಲಚೇತನರಿಗೆ ಪ್ಯಾನ್ ವಿತರಣೆ


ಕುಂದಗೋಳ: ಜೀವನದಲ್ಲಿ ನೊಂದುಕೊಂಡಿರುವ ವಿಕಲಚೇತನರಿಗೆ ನೆರವಾದ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ 15ನೇ ಹಣಕಾಸಿನ ಅನುದಾನದಲ್ಲಿ ವಿಕಲಚೇತನರಿಗೆ ಪ್ಯಾನ್ ಅನ್ನು ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಲ್ಲಾಪುರ ಕಡಪಟ್ಟಿ ಯರಿನಾರಾಯಣಪುರ ಗ್ರಾಮದ ವಿಕಲಚೇತನರಿಗೆ ಒಟ್ಟು 73 ಜನರಿಗೆ ವಿತರಿಸಿ ಮಾತನಾಡಿದ ಗ್ರಾಂ ಪ ಅಧ್ಯಕ್ಷ ಚಿದಾನಂದ ಕುಸುಗಲ ಮಾತನಾಡಿ ಅಂಗವಿಕಲರನ್ನು ಬುದ್ಧಿಮಾಂದ್ಯರನ್ನು ಕುರುಡರನ್ನು ನಾವು ನೀವು ಎಲ್ಲರೂ ಅವರನ್ನು ದೇವರ ಸಮಾನವಾಗಿ ಕಾಣಬೇಕು ಅಂದಾಗ ಅವರ ಬದುಕು ಹಸನುವಾಗಲೂ ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪ ಸದಸ್ಯ ಸಕ್ರಪ್ಪ ಕಂಬಾರ ಮಾತನಾಡಿ ದೈಹಿಕವಾಗಿ ಮಾನಸಿಕವಾಗಿ ನಾಂದವರು ಎಲ್ಲರೂ ಒಂದೇ ಎಂದು ನಾವು ಅವರ ಜೊತೆ ಇದ್ದಾಗ ಮಾತ್ರ ಅವರ ಬದುಕು ಸ್ವಾರ್ಥಕವಾಗುತ್ತದೆ ಅವರನ್ನು ನಮ್ಮಂತೆ ನಾವು ಕಾಣಬೇಕು ಯಾವತ್ತೂ ಅವರ ಭಾವನೆಯಲ್ಲಿ ನಾನು ಅಂಗವಿಕಲ ಬುದ್ಧಿಮಾಂದ್ಯ ಎಂದಿಗೂ ತಿಳಿದುಕೊಳ್ಳ ಹಾಗೆ ನೋಡಿಕೊಳ್ಳುವುದು ನಮ್ಮ ನಿಮ್ಮ ಜವಾಬ್ದಾರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಬಸವರಾಜ್ ಯೋಗಪ್ಪನವರ ಮಾಂತೇಶ ಕೆಂಚಣ್ಣವರ ಗುರುಪಾದಪ್ಪ ಹೊಸಳ್ಳಿ ಪರಶುರಾಮ ಹೊಸಳ್ಳಿ ಬಸವರಾಜ ಮಾದರ ಮಲ್ಲಿಕಾರ್ಜುನ ಎಮ್ಮಿ ಕಲ್ಲಪ್ಪ ಕಲ್ಲಣ್ಣನವರ ಅನ್ಸೂಯ ಮಾಗಡಿ ಅನುಸೂಯ ಮಾಗಡಿ ಶಂಕರ್ ಜೀವಣ್ಣವರ ಗೋಪಾಲ ದೊಡ್ಡಮನಿ ಹಾಗೂ ಇನ್ನಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *