ಭಾರತದ ಮೇಲಿನ ಕ್ಷಿಪಣಿ ದಾಳಿ ವಿಫಲ ಬೆನ್ನಲ್ಲೇ ಜಮ್ಮುವಿನ ಹಲವು ಕಡೆಗಳಲ್ಲಿ ಪಾಕ್ ಶೆಲ್ ದಾಳಿ ನಡೆಸಿದ್ದು, ಇಬ್ಬರು ಬಲಿಯಾಗಿದ್ದಾರೆ. ಘಟನೆಯಲ್ಲಿ ಸುಮಾರು 6 ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ಉದ್ವಿಗ್ನ ಬೆನ್ನಲ್ಲೇ ಪಂಜಾಬ್, ಹರ್ಯಾಣ, ರಾಜಸ್ಥಾನ ಸೇರಿದಂತೆ ಹಲವು ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಕಣಿವೆ ರಾಜ್ಯದಲ್ಲಿ ಶುಕ್ರವಾರ ಮುಂಜಾನೆಯಿಡಿ ಸ್ಫೋಟದ ಸದ್ದುಗಳು ಕೇಳಿಸಿದೆ. ಪೂಂಛ್, ರಜೌರಿ, ಜಮ್ಮು ಜಿಲ್ಲೆಗಳಲ್ಲಿ ಪಾಕಿಸ್ತಾನ ರಾತ್ರಿಯಿಡೀ ಕದನ ವಿರಾಮ ಉಲ್ಲಂಘಿಸಿದೆ. ಭಾರತ ಸಲೇನೆಯೂ ತಕ್ಕ ಉತ್ತರ ನೀಡಿದೆ.. ಬೆಳಗಿನ ಜಾವ 3.50 ರಿಂದ 4.45ರ ನಡುವೆ ಭದ್ರತಾ ಪಡೆ ಸೈರನ್ ಮೊಳಗಿದೆ.ಗುರುವಾರ ರಾತ್ರಿ ದಾಳಿ ಆತಂಕ ಎದುರಿಸಿದ್ದ ರಾಜಸ್ಥಾನದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆಯಿಂದಾಗಿ ಲೈಟ್ ಆಫ್ ಮಾಡಿ ಎಚ್ಚರ ವಹಿಸಲಾಗಿದೆ. ರಾಜ್ಯದ ಗಡಿ ಜಿಲ್ಲೆಗಳ ಜನರು ಸ್ಪೋಟದ ಶಬ್ದಗಳು ಕೇಳಿಸಿದೆ. ಈ ಮಧ್ಯೆ ಶುಕ್ರವಾರ ಬೆಳಿಗ್ಗೆ ಜೈಸಲ್ಮೇರ್ ಜಿಲ್ಲೆಯ ಕಿಶನ್‌ಘಾಟ್ ಪ್ರದೇಶದಲ್ಲಿ ಬಾಂಬ್ ರೀತಿಯ ವಸ್ತು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
