ಟಿ.ದಾಸರಹಳ್ಳಿಯ ಮಲ್ಲಸಂದ್ರ ಹೆರಿಗೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮೀ ಚೌಧರಿ, ವೈದ್ಯರು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದಾಗ, ಇರುವೆಗಳು, ಧೂಳು ಹಿಡಿದ ಉಪಕರಣಗಳು, ಬಳಸಿರುವ ಸಿರಿಂಜ್‌ಗಳು ಕಂಡು ಬಂತು. ವೈದ್ಯರ ಕೊರತೆಯಿಂದಾಗಿ ತಿಂಗಳಿನಿಂದ ಹೆರಿಗೆ ವಾರ್ಡ್ ಬಂದ್ ಆಗಿರುವ ವಿಚಾರ ತಿಳಿದು, ವೈದ್ಯಾಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಬಳಿಕ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಂಜುನಾಥನಗರ, ಕಾಟರಾಯನ ನಗರ, ಕರೇಕಲ್ಲು ಹಾಗೂ ಮಹಾಲಕ್ಷ್ಮೀ ನಗರಕ್ಕೆ ಭೇಟಿ ನೀಡಿ ಮಹಿಳೆಯರು ಮತ್ತು ಸಾರ್ವಜನಿಕರ ಸಮಸ್ಯೆ ಆಲಿಸಿದರು.
