Breaking News

ನೆಲ್ಯಾಡಿ: ಕಟ್ಟಿಗೆ ಕೊಂಡೊಯ್ಯುವ ವಿಷಯದಲ್ಲಿ ಜಗಳ, ದೊಣ್ಣೆಯಿಂದ ಹೊಡೆದು ಕೊಲೆ!!

ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಕಟ್ಟಿಗೆ ಕೊಂಡೊಯ್ಯುವ ವಿಷಯದಲ್ಲಿ ಜಗಳ ನಡೆದು ದೊಡ್ಡಪ್ಪನ ಮಗನನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ.ಮೇ 8ರಂದು ರಾತ್ರಿ ಶರತ್‌ ಅವರ ಜಾಗದಲ್ಲಿ ಹಾಕಿದ್ದ ಕಟ್ಟಿಗೆಯನ್ನು ಜನಾರ್ದನ ಅವರ ಮನೆಯವರು ಕೊಂಡು ಹೋಗುತ್ತಿದ್ದಾಗ ಶರತ್ ಆಕ್ಷೇಪಿಸಿದ್ದರು. ಈ ವೇಳೆ ಗಲಾಟೆ ನಡೆದಿದೆ. ಮೇ 9ರಂದು ರಾತ್ರಿ ಶರತ್ ಅವರು ಮಾದೇರಿಯಲ್ಲಿರುವ ಜನಾರ್ದನ ಅವರ ಮನೆ ಅಂಗಳದಲ್ಲಿ ನಿಂತು ಅವರ ಪುತ್ರ ಸತೀಶ ಅವರನ್ನು ನಿಂದಿಸುತ್ತಿದ್ದರು.ಈ ವೇಳೆ ಹರಿಪ್ರಸಾದ್ ಅವರು ಬಂದು ಮರದ ದೊಣ್ಣೆಯಿಂದ ಶರತ್ ಅವರ ತಲೆಗೆ ಹಲ್ಲೆ ನಡೆಸಿದ್ದರು. ಈ ವೇಳೆ ಕುಸಿದು ಬಿದ್ದ ಶರತ್ ಅವರ ತಲೆಗೆ ಮತ್ತೆ ಬಲವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಶರತ್ ಅವರ ಸಹೋದರ ಚರಣ್ ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಪುತ್ತೂರು ಗ್ರಾಮಾಂತರ ಸಿಪಿಐ ರವಿ ಬಿ.ಎಸ್., ಉಪ್ಪಿನಂಗಡಿ ಪಿಎಸ್‌ಐ ಅವಿನಾಶ್ ಗೌಡ ಭಾಗವಹಿಸಿದ್ದರು

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *