ಮಡಿಕೇರಿ: ರಾಜ್ಯದಲ್ಲಿ ಅತಿಹೆಚ್ಚು ಸೇನೆಗೆ ಯೋಧರನ್ನು ಕೊಟ್ಟ ಜಿಲ್ಲೆ ಕೊಡಗು. ಈ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತಾಕೇರಿ ಮೂಲದ ಯೋಧರೊಬ್ಬರು ಸೇನೆಯಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಹೃದಯಾಘಾತದಿಂದ ಹುತಾತ್ಮರಾಗಿದ್ದಾರೆ.
ಯೋಧ ಮಹೇಶ್ ಎಂಬುವವರು ಉತ್ತರಾಖಂಡ್ ನ ಜೋಷಿಮತ್ತ್ ಎಂಬಲ್ಲಿ JCO ಆಗಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳಷ್ಟೇ ರಜೆಯಲ್ಲಿ ಊರಿಗೆ ಬಂದು ಹೋಗಿದ್ದರು. ಇನ್ನು 4 ವರ್ಷದಲ್ಲಿ ನಿವೃತ್ತಿ ಹೊಂದಲಿದ್ದರು. ದುರಾದೃಷ್ಟವಶಾತ್ ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನ ಅಗಲಿದ್ದಾರೆ.
ಕಳೆದ 22 ವರ್ಷದಿಂದ ಭಾರತೀಯ ಸೇನೆಯಲ್ಲಿದ್ದ ಮಹೇಶ್, ಬೆಂಗಳೂರು ಹೈದ್ರಾಬಾದ್, ಜಮ್ಮು & ಕಾಶ್ಮೀರ್, ಉತ್ತರಾಖಂಡ್ ಸೇರಿದಂತೆ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. ಇನ್ನೆರಡು ದಿನಗಳಲ್ಲಿ ಹುಟ್ಟೂರು ತಾಕೇರಿಗೆ ಯೋಧನ ಪಾರ್ಥಿವ ಶರೀರ ಆಗಮಿಸುವ ನಿರೀಕ್ಷೆ ಇದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

