ಆಕಸ್ಮಿಕವಾಗಿ ಫೈರಿಂಗ್ ಹಿನ್ನಲೆ ಗುಂಡು ಯುವಕನ ತೊಡೆ ಸೀಳಿರುವಂತಹ ಘಟನೆ ರಾಯಚೂರು ನಗರದ ಹೆಚ್‌ಆರ್‌ಬಿ ಬಡವಾಣೆಯಲ್ಲಿ ನಡೆದಿದೆ. ಮೊಹಮ್ಮದ್ ಸೊಹೈಲ್(16) ಗಾಯಗೊಂಡಿರುವ ವಿದ್ಯಾರ್ಥಿ. ಪಿಸ್ತೂಲ್ ಹೊಂದಿದ್ದ ಜಿಯಾ ಸೌದಾಗರ ವಿರುದ್ಧ ಸದರಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರದ ಜಾಕೀರ್ ಹುಸೇನ್ ಸರ್ಕಲ್‌ನಲ್ಲಿ ಮೊಹಮ್ಮದ್ ಸೊಹೈಲ್ ತಿಂಡಿ ಮಾಡುತ್ತಿದ್ದ. ಈ ವೇಳೆ ಸ್ನೇಹಿತ ಜಿಯಾ ಸೌದಾಗರ್ ಭೇಟಿ ಆಗಿದ್ದಾನೆ. ಆಗ ಜಿಯಾ ಸೌದಾಗರ್ ಜೊತೆ ಆತನ ಮನೆಗೆ ಹೋಗಿದ್ದಾನೆ. ಮನೆಯಲ್ಲಿ ಪಿಸ್ತೂಲ್ ತೆಗೆದುಕೊಂಡ ಸೌದಾಗರ್, ಅದಕ್ಕೆ 4 ಬುಲೆಟ್ ಲೋಡ್ ಮಾಡಿದ್ದಾನ. ನಂತರ ಪಿಸ್ತೂಲ್ ಬೆಡ್ ಮೇಲೆ ಇಟ್ಟಾಗ ಏಕಾಏಕಿ ಮಿಸ್ ಫೈರ್ ಆಗಿದ್ದು, ಸೊಹೈಲ್ನ ಬಲ ತೊಡೆ ಸೀಳಿ, ಎಡ ತೊಡೆಗೆ ತಗುಲಿದೆ. ಸದ್ಯ ಗಾಯಾಳುವನ್ನು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

