Breaking News

ಹುಬ್ಬಳ್ಳಿ : ಪುಡಿ ರೌಡಿಗಳ ಅಟ್ಟಹಾಸಕ್ಕೆ, ಎನ್. ಶಶಿಕುಮಾರ್ ಹೇಳಿಕೆ. ಹುಬ್ಬಳ್ಳಿ ಪ್ರಕರಣಗಳ ಬಗ್ಗೆ ಮಾತನಾಡಿದ ಆಯುಕ್ತಕ ಶಶಿಕುಮಾರ್.

ಚಿಕ್ಕ ಚಿಕ್ಕ ಮಕ್ಕಳು ಕೈಯಲ್ಲಿದೆ ಚಾಕು ಇರಿಯುವ ಪ್ರಕರಣ ಬೆಳಕಿಗೆ ಬಂದಿವೆ.ಸಾಮಾಜಿಕ ಜಾಲತಾಣಗಳನ್ನ ತಮ್ಮ ವೈಭವಕ್ಕೆ ಉಪಯೋಗಿಸಿಕೊಳ್ತಾ ಇದ್ದರೋ ಮೇಲೆ ನಿಗಾ ಇಟ್ಟಿದ್ದೇವೆ.28 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದೇವೆ.ಈ ಪ್ರಕರಣಗಳಲ್ಲಿ 58 ರೌಡಿ ಶೀಟರ್ ಗಳನ್ನ ಗುರಿಯಾಗಿಸಿಕೊಂಡಿದ್ದೇವೆ
700 ಸಾಮಾಜಿಕ ಜಾಲತಾಣಗಳ ಖಾತೆಗಳನ್ನ ಅಳವಡಿಸಿಕೊಂಡಿದ್ದೇವೆ. ಕಾಮೆಂಟ್ ಗಳನ್ನ ಸಹ ಪರಿಶೀಲನೆ ನಡೆಸಿದ್ದೇವೆ. ತಲ್ವಾರ್ ಸೇರಿ ಆಯುಧಗಳನ್ನ ಇಟ್ಟುಕೊಂಡು ವ್ಯಯಕ್ತಿಕ ವೈಭವಿಕರಣ ಮಾಡುವಂತವರ ಮೇಲೆ ಕ್ರಮ ಕೈಗೊಂಡಿದ್ದೇವೆ.ಯುವ ಸಮುದಾಯಗಳನ್ನ ಅಪರಾಧ ಜಗತ್ತಿಗೆ ಸೆಳೆಯುವಂತೆ ಮಾಡುವುದು
ಪ್ರತಿಭಟನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬೆಂಬಲಿಗ ಪಡೆ ಮಾಡಿಕೊಂಡು ಭಯ ಪಡಿಸುವ ವಾತಾವರಣ ಸೃಷ್ಟಿ ಮಾಡುವುದು. ಶಾಲಾ-ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸುವುದು, ಹು-ಧಾ ಕಾನೂನು-ಸುವ್ಯವಸ್ಥೆಯ 15 ಠಾಣೆಗಳಲ್ಲಿ ಒಟ್ಟು 28 ಪ್ರಕರಣಗಳನ್ನು ದಾಖಲಿಸಿದ್ದೇವೆ.ಇನ್ಸ್ಟಾಗ್ರಾಮ್, ಫೇಸ್ ಬುಕ್, ಯುಟ್ಯೂಬ್ ಗಳಲ್ಲಿ ಭಯ ಹುಟ್ಟಿಸುವ ಕ್ರಿಯೆ ಮಾಡಿದ್ದಾರೆ ಎಂಬ ಹಿನ್ನೆಲೆ ದಾಖಲು ಮಾಡಿಕೊಂಡಿದ್ದೇವೆ.ಇದರಲ್ಲಿ ಕೆಲವು ಪ್ರಕರಣದಲ್ಲಿ ಅರೆಸ್ಟ್ ಮಾಡುವ ಪ್ರಕ್ರಿಯೆ ಮಾಡುವುದಿದ್ದಲ್ಲಿ ಮಾಡುತ್ತೇವೆ. ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನ ಕ್ಲೋಸ್ ಮಾಡುವ ಕೆಲಸ ಸಹ ಮಾಡಲಾಗುತ್ತೆ.ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡೋದಕ್ಕೆ ನಮ್ಮ ಹಿರಿಯ ಅಧಿಕಾರಿಗಳು ಮಾಡ್ತಾ ಇದ್ದಾರೆ.ನಮ್ಮ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸಿ ಮಾಡಿದ್ದಾರೆ.ಗೃಹ ಇಲಾಖೆಯಿಂದ ಈ ಬಗ್ಗೆ ನಿರ್ದೇಶನ ಬಂದಿತ್ತು
ಈ ಹಿನ್ನೆಲೆ ನಾವು ಕಳೆದ ಹಲವು ದಿನಗಳಳಿಂದ ಕಾರ್ಯಾಚಾರಣೆ ಮಾಡಲಾಗಿದೆ ಎಂದು ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *