ಬೈಯಲಪಾರಿನ ಐ.ಪಿ.ಎಂ ಗೇಟ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಸೋಲಾಪುರ ನಿವಾಸಿ ವಾಸಿಮ್ ಇಸಾಕ ಮುಜಾವರ (27), ದಾಂಡೇಲಿಯ ಸುಭಾಸ ನಗರದ ನಿವಾಸಿ ಶಾನವಾಜ ಇಮ್ತಿಯಾಜ ಶೇಖ (22) ಬಂಧಿತ ಆರೋಪಿಗಳಾಗಿದ್ದು, ಅವರಿಂದ ₹60,000 ಮೌಲ್ಯದ 1ಕೆ.ಜಿ 198 ಗ್ರಾಂ ಗಾಂಜಾ ಹಾಗೂ ಮಾರಾಟ ಮಾಡಿ ಬಂದ ನಗದು ₹550 ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

