Breaking News

ಮೈಸೂರು :ಭಾರತಿ ಸಿಮೆಂಟ್ ನಿರ್ದೇಶಕ‌ ಗೋವಿಂದಪ್ಪ ಬಾಲಾಜಿ ಮೈಸೂರಿನಲ್ಲಿ ಅರೆಸ್ಟ್‌!

ಭಾರತಿ ಸಿಮೆಂಟ್‌ ನಿರ್ದೇಶಕ ಗೋವಿಂದಪ್ಪ ಬಾಲಾಜಿಯನ್ನು ಆಂಧ್ರಪ್ರದೇಶ ಅಬಕಾರಿ ಹಗರಣದ ಆರೋಪದಲ್ಲಿ ಮೈಸೂರಿನಲಿ ಬಂಧಿಸಲಾಗಿದೆ ಆಂಧ್ರದಲ್ಲಿ ನಡೆದ ಸಾವಿರಾರು ಕೋಟಿ ರೂ. ಮೊತ್ತದ ಈ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಗೋವಿಂದಪ್ಪ ಬಾಲಾಜಿ, ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದರು.ನಾಪತ್ತೆಯಾಗಿದ್ದ ಗೋವಿಂದಪ್ಪ ಬಾಲಾಜಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲ್ ಆಂ‍ಧ್ರ ಪೊಲೀಸರು ಬೆನ್ನಟ್ಟಿದ್ದರು. ಮೇ 13ಮಂಗಳವಾರ ದಂದು ಗೋವಿಂದಪ್ಪ ಬಾಲಾಜಿಯವರನ್ನು ವಶಕ್ಕೆ ಪಡೆಯಲಾಗಿದ್ದು, ವಿಜಯವಾಡ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗುತ್ತಿದೆ.ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *