ಅರೇಹಳ್ಳಿಯಲ್ಲಿ ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಚನ್ನರಾಯಪಟ್ಟಣದ ಯುವಕ ಪ್ರಜ್ವಲ್ ತನ್ನ ಪತ್ನಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ (19) ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗುವಾಗ, ಯುವತಿಯ ತಂದೆ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿ ಚಲಿಸುತ್ತಿದ್ದ ಕಾರಿನ ಬಾಗಿಲಿಗೆ ನೇತಾಡಿದ್ದಾರೆ.ಘಟನೆಯ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಜ್ವಲ್ ಮತ್ತು ಪ್ರಸ್ಟಲ್ ಚನ್ನರಾಯಪಟ್ಟಣ ಪೊಲೀಸರ ಎದುರು ಹಾಜರಾಗಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದು, ಘಟನೆಯ ಸಂಪೂರ್ಣ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರಸ್ಟಲ್‌ನ ತಂದೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
