ತೆಲಂಗಾಣ ಮಾದಕ ದ್ರವ್ಯ ವಿರೋಧಿ ಬ್ಯೂರ ಕೊಕೇನ್ ಸೇವನೆ ಮತ್ತು ಖರೀದಿಯ ಆರೋಪದ ಮೇಲೆ ಹೈದರಾಬಾದ್‌ನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಮಾಜಿ ಸಿಇಒ ಆಗಿದ್ದ ವೈದ್ಯೆಯನ್ನು ಬಂಧಿಸಿದೆ.ನಮ್ರತಾ ಚಿಗುರುಪತಿ 53 ಗ್ರಾಂ ಕೊಕೇನ್, ಎರಡು ಮೊಬೈಲ್ ಫೋನ್‌ಗಳು ಮತ್ತು 10,000 ರೂ. ನಗದಿನ ಜೊತೆಗೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.ನಮ್ರತಾ ಒಮೆಗಾ ಆಸ್ಪತ್ರೆಗಳ ಮಾಜಿ ಮುಖ್ಯಸ್ಥರಾಗಿದ್ದು, ಕೊಕೇನ್ ಸೇವನೆಯ ಚಟಕ್ಕೆ ತೀವ್ರವಾಗಿ ಒಳಗಾಗಿದ್ದರು. ಈ ಚಟಕ್ಕಾಗಿ ಆಕೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ್ದಾರೆ. ಇತ್ತೀಚೆಗೆ ಕೊರಿಯರ್ ಮೂಲಕ ಕೊಕೇನ್ ತರಿಸಿಕೊಳ್ಳುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ನಮ್ರತಾ ಮುಂಬೈ ಮೂಲದ ಡ್ರಗ್ಸ್ ಪೂರೈಕೆದಾರ ವಂಶ್ ಧಕ್ಕರ್‌ನೊಂದಿಗೆ ಸಂಪರ್ಕ ಹೊಂದಿದ್ದರು. ಈತ ಆಕೆಯ ಬೇಡಿಕೆಯಂತೆ ಕೊಕೇನ್ ಸರಬರಾಜು ಮಾಡುತ್ತಿದ್ದ. ಬಾಲಕೃಷ್ಣ ಎಂಬಾತ ಕೊರಿಯರ್ ಮೂಲಕ ಕೊಕೇನ್ ತಲುಪಿಸುತ್ತಿದ್ದ. ಇವರ ಹಣದ ವಹಿವಾಟು ವಾಟ್ಸಾಪ್ ಮೂಲಕವೇ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

