ಬಡ್ಡಿದಂಧೆಯ ಮೊದಲ ಬೇರು ಇಲಾಖೆಯಲ್ಲಿ..????
ಸಮಯ ಕೊಡಿ ಅಂದ್ರೆ ನಾವು ಇನ್ನು ಮುವತ್ತು ವರ್ಷ ಸರ್ವಿಸ್ ಮಾಡ್ತೇವಿ ನೋಡು ಅಂತ ಧಮ್ಕಿ…
ಸಲಾಂ ಸಲಾಂ ಅಂದ್ರು ಕರುಣೆ ಇಲ್ಲಿದ ಕಟುಕರು!!!
ಕರ್ಮ ರಿಟರ್ನಸ್ ..ಮಾಡಿದ್ದ ಉಣ್ಣೋ ಮಾರಯ್ಯ ಅನ್ನೊ ಮಾತು ನೆನಪಿಗೆ ಬರುವ ದಿನ…
ಈ ಸುದ್ದಿ ಪ್ರಸಾರ ಆದ ನಂತರ ಎಷ್ಟು ಮಂದಿ ಅಮಾನತ್ತು ಆಗ್ತಾರೆ ಅಂದ್ರೆ ಉಹಿಸಲು ಆಗದ ಸ್ಟೋರಿ…….
ಹುಬ್ಬಳ್ಳಿ: ಅವಳಿ ನಗರದಲ್ಲಿ ಬಡವರ ರಕ್ತ ಹೀರೊ ಬಡ್ಡಿದಂಧೆ ಕೋರರಿಗೆ ಕಡಿವಾಣ ಹಾಕುವ ಪೊಲೀಸ್ ಇಲಾಖೆ ಕನಸಿಗೆ ಕೊಳ್ಳೆಯಿಡಲು ಹೊರಟಿರುವವರು…. ಇದೇ ಇಲಾಖೆಯ ಕೆಲವೊಂದಷ್ಟು ಪೊಲೀಸರು,ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾತು ಕೇಳಿದರೆ ಸಾರ್ವಜನಿಕರೆ ಒಂದು ಕ್ಷಣ ದಿಗ್ಭ್ರಮೆ ಬೀಳುತ್ತಾರೆ. ಹೌದು ಈ ಮಾತು ನಾವ್ಯಾಕೆ ಹೇಳ್ತಾ ಇದಿವಿ ಅಂದ್ರೆ ನಾವಿರುವ ಕ್ಷೇತ್ರದಲ್ಲಿ ನಮಗೆ ರಕ್ಷಣೆ ನೀಡುವ ಪೊಲೀಸರೇ ನಮಗೆ ದೇವರು…..

ದೇವರು ಅಂತ ನಂಬಿರುವ ಅವಳಿ ನಗರದ ಈ ಮುಗ್ಧ ಜನರಿಗೆ ಮೋಸ ಮಾಡಿದ್ದು ಮಾತ್ರ ಈ ಒಂದು ಚಿಂಗ್ಂ ಟೀಂ… ಸ್ನೇಹಜೀವಿ ಅಂತ ಹಣೆಪಟ್ಟಿ ಕಟ್ಟಿಕೊಂಡು ರಕ್ತ ಹೀರುವ ಕೆಲವೊಂದಿಷ್ಟು ಹೀನ ಮನಸ್ಥಿತಿಯ ಪೊಲೀಸರ ಒಂದು ಟೀಮ್ ರಾಜಾರೋಷವಾಗಿ ಬಡ್ಡಿದಂಧೆಗೆ ಇಳಿದಿದೆ,…. ಬಡ ಆಟೋ ಚಾಲಕರಿಗೆ ಮೀಟರ್ ಬಡ್ಡಿ ರೂಪದಲ್ಲಿ ಅಸಲಿ ಹಣಕ್ಕಿಂತ 10 ಪಟ್ಟು ಬಡ್ಡಿಯನ್ನು ವಸೂಲಿ ಮಾಡಿದರು ಇವರ ಕಿರುಕುಳ ಮಾತ್ರ ನಿರಂತರವಾಗಿ ನಡಿತಾ ಇದೆ,

ಈ ಬಡ್ಡಿ ದಂಧೆ ಕೊರರ ಸಂಪೂರ್ಣ ಮಾಹಿತಿ ಬಿಗ್ ಟಿವಿ ನ್ಯೂಸ್ ಗೆ ಲಭ್ಯವಾಗಿದ್ದು ಈ ದಂದೆಯಲ್ಲಿ ಭಾಗಿಯಾಗಿರುವ ಕಿರಾತಕರ ಆಡಿಯೋ ಹಾಗೂ ಹಣ ವರ್ಗಾವಣೆಯಾಗಿರುವ ದಾಖಲೆಗಳು ಮತ್ತು ಕಿರುಕುಳ ಅನುಭವಿಸಿರುವ ಮಾತುಗಳು ಜನರ ಮುಂದೆ ಬಿಚ್ಚಿಡಲಿದೆ ಈ ಬಿಗ್ ಟಿವಿ ನ್ಯೂಸ್….
ಬಡ್ಡಿ ಬಕಾಸುರರು ಚಾಪ್ಟರ್ 01 ಮುಂದಿನ ಭಾಗದಲ್ಲಿನಿಮ್ಮ ಮುಂದೆ ಅತೀ ಶೀಘ್ರದಲ್ಲೇ….
bigtvnews | Hubli Dharwad News | Kannada News | Karnataka News Hubli News | News In Hubli | Local news

