Breaking News

ಬೆಂಗಳೂರು :ಒಣ ಹಾಕಿದ್ದ ಬ್ರ್ಯಾಂಡೆಡ್‌ ಬಟ್ಟೆಗಳನ್ನು ಕದ್ದ ಬೈಕ್‌ ಸವಾರ!

ಮನೆ ಮುಂಭಾಗ ಒಣಗಲು ಹಾಕಿದ್ದ ಬಟ್ಟೆಗಳ ಪೈಕಿ ಬ್ರ್ಯಾಂಡೆಡ್‌ ಬಟ್ಟೆಗಳನ್ನೇ ಕಳ್ಳನೊಬ್ಬ ಹಾಡಹಗಲೇ ಕದ್ದು ಪರಾರಿಯಾಗಿರುವ ಘಟನೆ ಪುಲಿಕೇಶಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ದೋಷ ಪೂರಿತ ನಂಬರ್‌ ಪ್ಲೇಟ್‌ ಅಳವಡಿಸಿದ್ದ ದ್ವಿಚಕ್ರ ವಾಹನದಲ್ಲಿ ಬಂದಿರುವ ಕಳ್ಳ, ಮನೆ ಎದುರು ದ್ವಿಚಕ್ರ ವಾಹನ ನಿಲ್ಲಿಸಿ ಸುತ್ತಮುತ್ತ ಯಾರಾದರೂ ಇದ್ದಾರೆಯೇ ಎಂದು ಗಮನಿಸಿದ್ದಾನೆ. ಬಳಿಕ ಗೇಟ್‌ ತೆಗೆದುಕೊಂಡು ಒಳಗೆ ಬಂದು ಮನೆ ಎದುರು ಒಣಗಲು ಹಾಕಿದ್ದ ಬಟ್ಟೆಗಳ ಪೈಕಿ ಕೇವಲ ಬ್ರ್ಯಾಂಡೆಡ್‌ ಬಟ್ಟೆಗಳನ್ನು ಕದ್ದು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಈ ಘಟನೆ ಕುರಿತ ದೂರಿಗೆ ಎಕ್ಸ್‌ ಖಾತೆಯಲ್ಲೇ ಪ್ರತಿಕ್ರಿಯಿಸಿರುವ ನಗರ ಪೊಲೀಸರು ಘಟನೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡು ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.ಸಂಬಂಧ ಮಾಧುರಿ ಅದ್ನಾಲ್‌ ಎಂಬುವರು ಎಕ್ಸ್‌ ಖಾತೆಯಲ್ಲಿ ಸಿಸಿ ಕ್ಯಾಮೆರಾ ವಿಡಿಯೋ ಸಮೇತ ಪೋಸ್ಟ್‌ ಮಾಡಿ ನಗರ ಪೊಲೀಸರಿಗೂ ಟ್ಯಾಗ್‌ ಮಾಡಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *