Breaking News

ಐಪಿಎಲ್ ಬೆಟ್ಟಿಂಗ್- ಬಿಗ್ ಟಿವಿ ವರದಿಗೆ ಎಚ್ಚೆತ್ತು ಎರಡು ಗಂಟೆಯಲ್ಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೋಲಿಸರು- Big TV Impact..

ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿದಿನ ಒಂದಿಲ್ಲೊಂದು ಅಕ್ರಮ ಚಟುವಟಿಕೆಗಳು ಸದ್ದಿಲ್ಲದೆ ನೆಡಿತಾನೆ ಇವೆ. ಅದೇ ಸಾಲಿಗೆ ಸೇರಿರುವ ಕ್ರೀಕೆಟ್ ಬೆಟ್ಟಿಂಗ್ ವಾಸನೆ ವಾಣಿಜ್ಯ ನಗರಿಯಲ್ಲಿ ಜೋರಾಗೆ ಹರಿದಾಡುತ್ತಿದ್ದು ಈ ಕುರಿತು ಬಿಗ್ ಟಿವಿ ನ್ಯೂಸ್ ವರದಿ ಪ್ರಸಾರ ಮಾಡಿತ್ತು.ವರದಿ ಕಂಡು ಎಚ್ಚೆತ್ತ ಅಧಿಕಾರಿಗಳು ಹಾಗೂ ಪೋಲಿಸರು ಬೆಟ್ಟಿಂಗ್ ನೆಡೆಸುತ್ತಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ ಅವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಾದ ಕಾಶಿನಾಥ ಪವಾರ್ ಹಾಗೂ ಕಿರಣ ಭಜಂತ್ರಿ ಎನ್ನಲಾಗಿದ್ದು. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನೆಡೆಸುತ್ತಿದ್ದರು. ಇದರಲ್ಲಿ ಕಿರಣ ಭಜಂತ್ರಿ ಪರಾರಿಯಾಗಿದ್ದು ,ಕಿರಣ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ. ಇನ್ನೂ
ವಾಣಿಜ್ಯ ನಗರಿಯಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದ್ದು ಯುವ ಜನರು ಈ ಬೆಟ್ಟಿಂಗ್ ಭೂತಕ್ಕೆ ಒಳಗಾಗಿ ಸಾಲ‌ಮಾಡಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.ಈ ಕುರಿತು ವರದಿ ಮಾಡಿದ್ದ ಬಿಗ್ ಟಿವಿ ನ್ಯೂಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರದಿ ಕಂಡ ಪೋಲಿಸ್ ಆಯುಕ್ತರು ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಿ‌ನಲ್ಲಿ ವಾಣಿಜ್ಯ ನಗರಿಯಲ್ಲಿ ಬೆಟ್ಟಿಂಗ್ ದಂಧೆಗೆ ಸದ್ಯೆಕ್ಕೆ ಬ್ರೇಕ್ ಬಿದ್ದಂತಾಗಿದೆ.ಇನ್ನಾದರೂ ಸಂಭಂದಿಸಿದ ಅಧಿಕಾರಿಗಳು ಬೆಟ್ಟಿಂಗ್ ದಂಧೆ ನಿಯಂತ್ರಣ ಮಾಡ್ತಾರಾ ಕಾದು ನೋಡಬೇಕಿದೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *