Breaking News

ಜಮಖಂಡಿ :ಕ್ರಿಕೆಟ್ ಬಾಲ್ ವಿಷಯಕ್ಕೆ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಯುವಕ!

ಯುವಕನೊಬ್ಬ ಶಿಕ್ಷಕನಿಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ನಂತರ ಚಾಕುವಿನಿಂದ ಇರಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.ಶಿಕ್ಷಕನ ಮನೆಯ ಒಳಗೆ ಕ್ರಿಕೆಟ್ ಚೆಂಡು ಬಿದ್ದಿದೆ ಕೊಡು ಎಂದು ಯುವಕ ಪ್ರಶ್ನಿಸಿದ್ದಾನೆ. ಆದರೆ ಚೆಂಡು ಮನೆಯಲ್ಲಿ ಬಿದ್ದಿಲ್ಲ ಎಂದು ಶಿಕ್ಷಕ ಉತ್ತರಿಸಿದ್ದಾನೆ. ಇದರಿಂದ ಅಸಮಾಧಾನಗೊಂಡ ಪವನ್ ಜಾಧವ್ ಹಲ್ಲೆ ನಡೆಸಿ ನಂತರ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ರಾಮು ಪೂಜಾರಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಅಪಾಯದಿಂದ ಪಾರಾಗಿದ್ದಾರೆ.ಈ ಹಿಂದೆ ಶಿಕ್ಷಕ ಬೈದು ಬುದ್ದಿವಾದ ಹೇಳಿದ್ದರಂತೆ. ಇದರಿಂದ ದ್ವೇಷ ಹೊಂದಿದ್ದ ಪವನ್ ಈ ಅವಕಾಶ ಬಳಸಿಕೊಂಡು ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಾವಳಗಿ ಠಾಣೆಯ ಪೊಲೀಸರು ಯುವಕನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *