Breaking News

ಕಪಾಲಿ ಮೋಹನ್ ನಡೆಸ್ತಿದ್ದ ಜೂಜು ಅಡ್ಡೆ ಮೇಲೆ ರೇಡ್..

ಬೆಂಗಳೂರು: ಸ್ಯಾಂಡಲ್​ವುಡ್​ ಚಿತ್ರ ನಿರ್ಮಾಪಕ ಕಪಾಲಿ ಮೋಹನ್ ನಡೆಸುತ್ತಿದ್ದ ಗ್ಯಾಂಬ್ಲಿಂಗ್ ಅಡ್ಡೆಯ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ಅಡ್ಡೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಜೂಜಾಡುತ್ತಿದ್ದ ಆಂಧ್ರ ಮತ್ತು ತೆಲಂಗಾಣ ಮೂಲದ 47 ಜನರನ್ನ ಬಂಧಿಸಿದ್ದಾರೆ. ಸ್ಥಳದಲ್ಲಿ ನಕಲಿ ಐಡಿ ಕಾರ್ಡ್​ಗಳು ಹಾಗೂ ಮದ್ಯ ಪತ್ತೆಯಾಗಿದ್ದು, 3.5 ಕೋಟಿ ರೂಪಾಯಿ ಬೆಲೆ ಬಾಳುವ ಗ್ಯಾಂಬ್ಲಿಂಗ್​ ಟೋಕನ್​ ಮತ್ತು 9 ಲಕ್ಷ ರೂಪಾಯಿಯನ್ನ ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇನ್ನು ಹೊರರಾಜ್ಯದ ಹವ್ಯಾಸಿ ಗ್ಯಾಂಬ್ಲರ್​ಗಳ ಫ್ಲೈಟ್​ ಟಿಕೆಟ್​ ವೆಚ್ಚ ಭರಿಸಿ ಜೂಜಾಡಲು ಕರೆಸಿಕೊಳ್ಳಲಾಗುತ್ತಿತ್ತು ಎಂಬುದು ಸಿಸಿಬಿ ದಾಳಿ ವೇಳೆ ಬೆಳಕಿಗೆ ಬಂದಿದೆ.
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *