ಭಾರಿ ಮಳೆಗೆ ಬೆಂಗಳೂರಿನಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇದೀಗ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನಪ್ಪಿದ್ದಾರೆ.ಜಲಾಶಯ ವೀಕ್ಷಣೆಗೆ ಎಂದು 7 ಯುವತಿಯರು ತೆರಳಿದ್ದಾರೆ. ಓರ್ವ ಯುವತಿ ನೀರಿಗೆ ಬಿದ್ದಿದ್ದ ವೇಳೆ ರಕ್ಷಣೆಗೆ ಉಳಿದ ಸ್ನೇಹಿತೆಯರು ಧಾವಿಸಿದ್ದಾರೆ. ಯುವತಿಯ ರಕ್ಷಣೆಗಾಗಿ 7 ಯುವತಿಯರು ನೀರಿಗೆ ಧುಮುಕಿದ್ದಾರೆ. ಕೂಡಲೇ ಸ್ಥಳೀಯ ಓರ್ವ ಯುವಕ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾನೆ. ಸದ್ಯ ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವನಿಸಲಾಗಿದ್ದು, ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

