Breaking News

ಹುಬ್ಬಳ್ಳಿ: “ವಿದೇಶಿ ಪ್ರಜೆ ಅನುಮಾನಾಸ್ಪದವಾಗಿ ಅಡ್ಡಾಡುತ್ತಿಲ್ಲ”. ಪೊಲೀಸ ಕಮಿಷನರ್ ಎನ್ ಶಶಿಕುಮಾರ್ ಹೇಳಿಕೆ, ಶಾಸಕ ಅರವಿಂದ ಬೆಲ್ಲದ ಪತ್ರದ ಕುರಿತು ಪ್ರತಿಕ್ರಿಯೆ.

ಹುಬ್ಬಳ್ಳಿ ಧಾರವಾಡ ಸ್ಥಳೀಯ ಶಾಸಕರು ಒಂದಿಷ್ಟು ಮಾಹಿತಿ ನೀಡಿದ್ದರು.ಧಾರವಾಡ ಜನ್ನತ್ ನಗರದಲ್ಲಿ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದರು.ಮಾಹಿತಿ ಬಂದ ತಕ್ಷಣವೇ ನಾವು ಸರ್ಚ್ ಮಾಡಿ ಮಾಹಿತಿ ಕಲೆ‌ ಹಾಕಿದ್ದೇವೆ.ಜನ್ನತ್ ನಗರದ ಬಿಲಾಲ್ ಮಸೀದಿ ಹಾಗು ಆರೋಗ್ಯ ನಗರದ ಯೂಸುಫಿಯಾ ಮಸೀದಿಯಲ್ಲಿ ಹೊರಗಿನವರು ಬಂದಿದ್ದಾರೆ.
ಅನುಮಾನಸ್ಪದ ವ್ಯಕ್ತಿಗಳು ಸೂರತ್ ಮೂಲದವರು ಅನ್ನೋದ ಪತ್ತೆಯಾಗಿದೆ.
ಯಾವುದೇ ವಿದೇಶಿ ಪ್ರಜೆಗಳು ಬಗ್ಗೆ ಮಾಹಿತಿ ಸಿಕ್ಕಿಲ.ಇವರ ಪೂರ್ವಾಪರ ಎಲ್ಲ ಮಾಹಿತಿ ಕಲೆಹಾಕಿದ್ದೇವೆ.ಕೆಲವರು ಮಸೀದಿಯಲ್ಲಿ ತರಬೇತಿ ಪಡೆದುಕೊಳ್ಳಲು ಬಂದಿದ್ದಾರೆ. ಈ ಬಗ್ಗೆ ಪಾಲಿಕೆ‌ ವಲಯ ಅಧಿಕಾರಿಗಳ ಸಹ ಅನುಮಾನಸ್ಪದ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದುವರೆಗೆ ಹುಬ್ಬಳ್ಳಿ ಧಾರವಾಡದಲ್ಲಿ ಓರ್ವ ಪಾಕಿಸ್ತಾನದ ಮಹಿಳೆ ಇರೋದು ಪತ್ತೆ ಹಚ್ಚಿದ್ದೇವೆ
ಅವರು ದೀರ್ಘಕಾಲದ ವೀಸಾ ಮೇಲೆ ವಾಸವಾಗಿದ್ದಾರೆ.ಅವರ ಮಾಹಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೀಡಿದ್ದೇವೆ
ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ
ಬಂದ ಬಳಿಕ ಅವರನ್ನು ವಾಸಪ ಕಳಿಸಬೇಕಾ? ಅಥವಾ ಏನ್ ಮಾಡಬೇಕು ಅದರ ತೀರ್ಮಾನ ಮಾಡುತ್ತೇವೆ.ಅತಿಹೆಚ್ಚು ಸೀಮ್ ಕಾರ್ಡ್ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ.ಸಿಮ್ ಯಾರಿಂದ ಮಾರಾಟವಾಗಿದೆ ಇತ್ಯಾದಿ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸಿಮ್ ಮಾರಾಟಗಾರರ ಸಭೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಎಂದು ಹುಬ್ಬಳ್ಳಿಯಲ್ಲಿ ಎನ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *