Breaking News

ಚಿಕ್ಕಮಗಳೂರು: ನಾಯಿಗಳ ದಾಳಿಗೆ ಜಿಂಕೆ ಸಾವು!

ಮೂಗ್ತಿಹಳ್ಳಿ ಬಳಿ ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡ ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಾಡಿಸಿದ್ದವು. ಈ ವೇಳೆ ತಂತಿ ಬೇಲಿ ದಾಟುವ ಪ್ರಯತ್ನದಲ್ಲಿ ಗಾಯಗೊಂಡಿತ್ತು.ನಾಯಿಗಳ ದಾಳಿಯಿಂದ ನಿತ್ರಾಣಗೊಂಡಿದ್ದ ಜಿಂಕೆ ರಕ್ಷಿಸಲು ಸ್ಥಳೀಯರು ನಡೆಸಿದ ಪ್ರಯತ್ನದ ನಡುವೆಯೂ ಮೃತಪಟ್ಟಿದೆ.ಸ್ಥಳೀಯರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ಹಿಡಿದು ರಕ್ಷಣೆ ಮಾಡಲು ಪ್ರಯತ್ನಿಸಿದರು.ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಜಿಂಕೆಯನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದರು. ನಾಯಿಗಳ ದಾಳಿಯಿಂದ ಗಾಬರಿಗೊಂಡಿದ್ದ ಜಿಂಕೆ ಆಘಾತಕ್ಕೆ ಒಳಗಾಗಿತ್ತು. ವೈದ್ಯರು ಬದುಕಿಸಲು ನಡೆಸಿದ ಪ್ರಯತ್ನ ವಿಫಲವಾಯಿತು. ಮರಣೋತ್ತರ ಪರೀಕ್ಷೆ ನಡೆಸಿ ಸಂಸ್ಕಾರ ನಡೆಸಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *