Breaking News

ನರಗುಂದ :ಬೀದಿ ನಾಯಿಗಳ ದಾಳಿ, 7 ಟಗರು ಸಾವು!

ರಾಚಯ್ಯ ನಗರದ ಹತ್ತಿರವಿರುವ ಫಾರ್ಮ್‌ಹೌಸ್‌ನಲ್ಲಿ ಸಾಕಿದ ಟಗರುಗಳ ಮೇಲೆ ಭಾನುವಾರ ಸಂಜಡ ಬೀದಿ ನಾಯಿಗಳು ದಾಳಿ ನಡೆಸಿದ್ದು, ಬೀರಪ್ಪ ಹನಮಪ್ಪ ಗೊಗೇರಿಯವರಿಗೆ ಸೇರಿದ 7 ಟಗರುಗಳು ಮೃತಪಟ್ಟಿವೆ. ಐದು ಟಗರುಗಳು ಗಂಭೀರ ಗಾಯಗೊಂಡಿವೆ.ತೀವ್ರ ಗಾಯಗೊಂಡ ಟಗರುಗಳಿಗೆ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಸಂತೋಷ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ.ಬೀದಿ ನಾಯಿಗಳ ದಾಳಿಯಿಂದ 7 ಟಗರು ಸಾವನ್ನಪ್ಪಿ, ಕೆಲವು ಟಗರುಗಳು ಗಾಯಗೊಂಡಿವೆ. ಇದರಿಂದ ₹1 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಬೀದಿ ನಾಯಿಗಳ ದಾಳಿಯಿಂದ ಟಗರುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪುರಸಭೆ ಅಧಿಕಾರಿಗಳು ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು’ ಎಂದು ಬೀರಪ್ಪ ಅವರು ಒತ್ತಾಯಿಸಿದರು.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *