Breaking News

ಬೆಂಗಳೂರು :ಕಲ್ಲು ತುಂಬಿದ್ದ ಟ್ರಕ್ ಪಲ್ಟಿ, ಲಾರಿ ಚಾಲಕ ಸಾವು!

ಕೊಡಿಗೇಹಳ್ಳಿ ಫ್ಲೈ ಓವರ್ ಮೇಲೆ ಈ ಡೆಡ್ಲಿ ಆಯಕ್ಸಿಡೆಂಟ್​​ ನಡೆದಿದೆ. 10 ವ್ಹೀಲರ್ ಓಪನ್ ಬಾಡಿ ವಾಹನ, ಕಸದ ಲಾರಿ ಮತ್ತು ಎರ್ಟಿಗಾ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಪರಿಣಾಮ ರಸ್ತೆ ಮೇಲೆಯೇ ಕಲ್ಲು ತುಂಬಿದ್ದ ಟ್ರಕ್ ಪಲ್ಟಿ ಹೊಡೆದಿದೆ.10 ವ್ಹೀಲರ್ ಓಪನ್ ಬಾಡಿ ವಾಹನ, ಕಸದ ಲಾರಿ ಮತ್ತು ಎರ್ಟಿಗಾ ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿದ್ದು, ಓರ್ವ ಸಾವನಪ್ಪಿದ್ದಾನೆ. ಕಸದ ಲಾರಿ ಚಾಲಕ ಫಯಾಜ್ ಅಹಮ್ಮದ್ ಸಾವನಪ್ಪಿದ್ದಾನೆ. ಕಸದ ಲಾರಿಗೆ ಕಲ್ಲಿನ ಬ್ಲಾಕ್ ತುಂಬಿಕೊಂಡಿದ್ದ 10 ವ್ಹೀಲರ್ ವಾಹನ ಹಿಂಬದಿಯಿಂದ ಡೆಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಕಲ್ಲು ತುಂಬಿದ್ದ ಟ್ರಕ್​ ರಸ್ತೆಯಲ್ಲೇ ಪಲ್ಟಿ ಹೊಡೆದಿದೆ. ಈ ವೇಳೆ ಕಸದ ಲಾರಿ ಮತ್ತು ಟ್ರಕ್​ ಮಧ್ಯೆ ಸಿಲುಕಿ ಚಾಲಕ ಸಾವನಪ್ಪಿದ್ದಾನೆ.ಚಾಲಕನ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Share News

About BigTv News

Check Also

1.15 ಕೋಟಿ ಹವಾಲಾ ಹಣ ದರೋಡೆ ಪ್ರಕರಣ: ಕಾನ್ಸ್‌ಟೇಬಲ್‌ ಅರೆಸ್ಟ್‌

ಕಾರವಾರ: 1.15 ಕೋಟಿ ರೂ. ಹವಾಲಾ ಹಣ ದರೋಡೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಟ್ರಾಫಿಕ್ ಪೊಲೀಸ್ ಠಾಣೆಯ …

Leave a Reply

Your email address will not be published. Required fields are marked *