ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮುದ್ದನಹಳ್ಳಿ ಮೀಸಲು ಅರಣ್ಯದ ಆನೇಚೌಕೂರು ಶಾಖೆಯ ಶೆಟ್ಟಹಳ್ಳಿ -ಲಕ್ಕಪಟ್ಟಣ ಗಸ್ತಿನಲ್ಲಿ ಸುಮಾರು 6 ವರ್ಷದ ಗಂಡು ಹುಲಿ ಕಳೇಬರ ಪತ್ತೆಯಾಗಿದೆ..ಹುಲಿ ಸಾವಿನ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರದಲ್ಲಿ ತಿಳಿಯಲಿದೆ’ ಎಂದು ಉಪ ಅರಣ್ಯ ಸಂರಕ್ಷಾಧಿಕಾರಿ ಸೀಮಾ ತಿಳಿಸಿದ್ದಾರೆ.ಹನಗೋಡು ಹಾಗೂ ಗುರುಪುರ ಅರಣ್ಯದಂಚಿನಲ್ಲಿ ಕಳೆದ ಹಲವು ದಿನಗಳಿಂದ ಜಾನುವಾರು ಬೇಟೆಯಾಡಿ ಆತಂಕ ಸೃಷ್ಟಿಸಿದ್ದ ಈ ಹುಲಿ ನೇರಳಕುಪ್ಪೆ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಹಸು ಕೊಂದುಹಾಕಿತ್ತು. ಹುಲಿ ಸೆರೆಗೆ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು’ ಎಂದು ಎ.ಸಿ.ಎಫ್ ಲಕ್ಷ್ಮೀಕಾಂತ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

