Breaking News

ಯಾವಾಗ್ಲೂ ನನ್ನ ಎದೆ ದಿಟ್ಟಿಸಿ ನೋಡ್ತಿದ್ರು, ಗರ್ಭಪಾತದ ನಂತರ ಮಹಿಳಾ ಉದ್ಯೋಗಿಗೆ ಅಜ್ಮೀರ್ ದರ್ಗಾಕ್ಕೆ ಹೋಗಲೇಬೇಕೆಂದಿದ್ದ ಟೀಂ ಲೀಡರ್: ಒಟ್ಟು 9 ಎಫ್‌ಐಆರ್!

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಬಿಪಿಒ ಘಟಕದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ ಮತ್ತು ಮತಾಂತರ ಯತ್ನ ಪ್ರಕರಣದಲ್ಲಿ ಆಘಾತಕಾರಿ ಸಂಗತಿಗಳು ಹೊರಬಂದಿವೆ.11 ವರ್ಷಗಳಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಮಹಿಳಾ ಉದ್ಯೋಗಿಯೊಬ್ಬರು ತನ್ನ ಮೇಲಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಫೆಬ್ರವರಿ 2026ರಲ್ಲಿ ಸಂತ್ರಸ್ತೆಯು ಅನಾರೋಗ್ಯದ ಕಾರಣ ಕೇಳಿದಾಗ, ತಾನು ಗರ್ಭಪಾತದಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು. ಈ ವೇಳೆ ಆರೋಪಿ ತೌಸಿಫ್ ಅತ್ತಾರ್, ಆಕೆಗೆ ಅಜ್ಮೀರ್‌ನ ಮೌಲ್ವಿಯೊಬ್ಬರ ಸಂಪರ್ಕ ಸಂಖ್ಯೆ ನೀಡಿ, ಅಲ್ಲಿಗೆ ಹೋಗಿ ಬಂದರೆ ಮಗು ಜನಿಸುತ್ತದೆ ಎಂದು ಹೇಳುವ ಮೂಲಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಇನ್ನೊಬ್ಬ ಆರೋಪಿ ಶಾಫಿ ಶೇಖ್ ಸಭೆಗಳ ಸಮಯದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ. ಎಚ್‌ಆರ್ ವಿಭಾಗವು ದೂರುಗಳನ್ನು ನಿರ್ಲಕ್ಷಿಸಿ ಕೇವಲ ವರ್ಗಾವಣೆ ಮಾಡುವ ಮೂಲಕ ಪ್ರಕರಣ ಮುಚ್ಚಿಹಾಕಲು ಯತ್ನಿಸಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 9 ಎಫ್‌ಐಆರ್ ದಾಖಲಾಗಿದ್ದು, ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿದೆ

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *