ಮಹೇಶ್ ಕೆ.ಕೆ. ಕೋನಾಪುರ ಗ್ರಾಮ, ಅರಕಲಗೂಡು ತಾಲ್ಲೂಕು ಇವರ ನಿವೇಶನ ಖಾತೆ ಸಂಖ್ಯೆ 52 ಮತ್ತು 206ಕ್ಕೆ ಸಂಬಂಧಿಸಿದಂತೆ ಇ-ಸ್ವತ್ತು ವಿತರಣೆ ಮಾಡಲು ಹಣ ಪಡೆದಿರುವ ಮತ್ತು ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.15ನೇ ಹಣಕಾಸು ಯೋಜನೆಯ ಅನುದಾನ ಮತ್ತು ನಿಧಿ-1, ನಿಧಿ-2 ರ ಅನುದಾನವನ್ನು ನಿಯಮ ಬಾಹಿರವಾಗಿ ವೆಚ್ಚ ಮಾಡಿರುವ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಅರಕಲಗೂಡು ಇವರು ತನಿಖೆ ನಡೆಸಿ ಸಲ್ಲಿಸಿರುವ ತನಿಖಾ ವರದಿಯನ್ವಯ ಇವರ ಮೇಲಿನ ಆರೋಪಗಳ ಕುರಿತು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸಿ.ಪಿ. ಮನು ಇವರನ್ನು ಅ.6 ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

