Breaking News

ಲೈಬೀರಿಯನ್ ಹಡಗಿನ ಕಂಟೈನರ್‌ಗಳು ಕೇರಳ ದಡದಲ್ಲಿ ಪತ್ತೆ!

ಕೇರಳ ಕರಾವಳಿಯಲ್ಲಿ ಮುಳುಗಿದ ಲೈಬೀರಿಯನ್ ಸರಕು ಹಡಗಿನ ಕಂಟೈನರ್‌ಗಳು ಸೋಮವಾರ ದಡಕ್ಕೆ ಬರಲು ಪ್ರಾರಂಭಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ.ಸರಕು ಹಡಗು ಮಗುಚಿ ಬಿದ್ದು, ಗಮನಾರ್ಹ ತೈಲ ಸೋರಿಕೆಗೆ ಉಂಟಾಗಿದೆ. ಇಂಧನ ಸೋರಿಕೆಯಿಂದಾಗಿ ರಾಜ್ಯಾದ್ಯಂತ ಎಚ್ಚರಿಕೆ ನೀಡಲಾಗಿದೆ. ಏಕೆಂದರೆ ಇಂಧನ ಗಂಟೆಗೆ ಸುಮಾರು ಮೂರು ಕಿಲೋಮೀಟರ್ ವೇಗದಲ್ಲಿ ತೇಲುತ್ತಿದೆ ಮತ್ತು ಶೀಘ್ರದಲ್ಲೇ ಪರಿಸರ ಸೂಕ್ಷ್ಮ ಕೇರಳ ಕರಾವಳಿಯ ಮೇಲೆ ಪರಿಣಾಮ ಬೀರುವ ಭೀತಿಯಿದೆ.ಹಡಗಿನ 640 ಕಂಟೇನರ್‌ಗಳಿದ್ದು, ಅವುಗಳಲ್ಲಿ 13 ಅಪಾಯಕಾರಿ ಸರಕುಗಳಿವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ ಮತ್ತು ಕಂಟೇನರ್‌ಗಳಿಂದ ದೂರವಿರಲು ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *