ತನ್ನ ಅಕ್ಕನ ಸಾವಿನಿಂದ ಹಲವು ವರ್ಷಗಳ ಕಾಲ ಮನನೊಂದ ಯುವಕನೋರ್ವನು ಸಹೋದರಿ ಧರಿಸುತ್ತಿದ್ದ ಸೀರೆ, ಆಭರಗಳನ್ನೇ ತೊಟ್ಟು ನೇಣು ಬಿಗಿದುಕೊಂಡ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.ಕಳೆದ ಮೇ.23ರಂದು ಸಂಜಯ್ ಕುಟುಂಬದವರು ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಹೊರಗೆ ಹೋಗಿದ್ದರು. ಮದುವೆಗೆ ಹೋಗಲು ನಿರಾಕರಿಸಿ ಮನೆಯಲ್ಲೇ ಸಂಜಯ್ ಉಳಿದಿದ್ದನು. ಸಂಜಯ್ಗೆ ಅವರ ಅಣ್ಣ ಧರ್ಮೇಂದ್ರ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದಕ್ಕೆ ಮನೆಗೆ ದೌಡಾಯಿಸಿದ ಕುಟುಂಬಕ್ಕೆ ಸಂಜಯ್ನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ದರ್ಶನವಾಗಿ ಸಿಡಿಲುಬಡಿದಂತಾಗಿದೆ.ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಸಂಜಯ್ನ ಮೃತದೇಹವು ಮಹಿಳೆಯಂತೆ ವೇಷ, ಸೀರೆ, ಮಂಗಳಸೂತ್ರ ಮತ್ತು ಆಭರಣಗಳನ್ನು ಧರಿಸಿದ್ದ ಸ್ಥಿತಿಯಲ್ಲಿ ಕಂಡು ಬೆಚ್ಚಿಬಿದ್ದಿದ್ದಾರೆ.
ಅತಾರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

