Breaking News
Featured Video Play Icon

ಹುಬಳ್ಳಿಯಲ್ಲಿ ಹಳೇ ದ್ವೇಷಕ್ಕಾಗಿ ಇಬ್ಬರಿಗೆ ಚಾಕು ಇರಿದ ಆರೋಪಿ ವಶಕ್ಕೆ…!

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನಲೆ ಯುವಕರಿಬ್ಬರಿಗೆ ಚಾಕು ಇರಿದ ಘಟನೆ ಆನಂದ ನಗರದ ಗೋಡಕೆ ಪ್ಲಾಟ್ ಬಳಿ ನಡೆದಿದೆ.ಸಮೀರ್ ಶೇಖ್ (18) ಹಾಗೂ ಚಿಕ್ಕಪ್ಪ ಜಾವೀದ್ ಶೇಖ್ (32) ಎಂಬ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ಮುಜಾಮಿಲ್ ಎಂಬ ಆರೋಪಿ ತನ್ನ ಸಹಚರರೊಂದಿಗೆ ಸಮೀರ್ ಹಾಗೂ ಜಾವೀದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದನು. ಈ ಕುರಿತು

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹಳೇ ದ್ವೇಷಕ್ಕಾಗಿ ಆರೋಪಿ ಯುವಕರಿಬ್ಬರ ಮೇಲೆ ಚಾಕು ಇರಿದಿದ್ದು, ಗಾಯಗೊಂಡ ಯುವಕನ ತಂದೆಗೆ ದೂರವಾಣಿ ಕರೆ ಮಾಡಿ, ನನ್ನ ವಿರುದ್ಧ ದೂರು ಕೊಡಬೇಡಿ, ಕೊಟ್ಟರೆ ಹೊರಗಡೆ ಬಂದ ಮೇಲೆ ನಿಮಗೂ ಸಹ ಜೀವಂತ ಬಿಡುವುದಿಲ್ಲ, ನಿಮ್ಮ ಕುಟುಂಬದ ಹೆಣ್ಣು ಮಕ್ಕಳಿಗೂ ಬಿಡೋದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ಆರೋಪಿ ಮುಜಾಮಿಲ್ ಹಣದ ಬೇಡಿಕೆ ಸಹ ಇಟ್ಟಿದ್ದಾನೆ. ಇನ್ನು ಘಟನೆ ನಂತರ ಆರೋಪಿ ಮುಜಾಮಿಲ್ ಓಡಿಹೋಗಿದ್ದಾನೆ.ನಂತರ ಹೊರವಲಯದಲ್ಲಿ ವಾಹನ ಮೇಲೆ ಬರುತ್ತಿದ್ದ ವ್ಯಕ್ತಿಗೆ ಆರೋಪಿ ಹಾಗೂ ಆತನ ಸಹಚರರು ಹಲ್ಲೆ ಮಾಡಿ ಹಣ ಕಿತ್ತುಕೊಂಡಿದ್ದಾರೆ. ಇಂದು ಬೆಳಿಗ್ಗೆ ಆರೋಪಿ ಮುಜಾಮಿಲ್ ನನ್ನು ಪತ್ತೆ ಹಚ್ಚಿ ಬಂಧನ ಮಾಡಲಾಗಿತ್ತು. ಇತರೆ ಆರೋಪಿಗಳನ್ನು ತೋರಿಸುತ್ತೇನೆ ಎಂದ ಹೋದ ಸಂದರ್ಭದಲ್ಲಿ ಆರೋಪಿ

ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ್ ಹಾಗೂ ಸಿಬ್ಬಂದಿ ಸುಬ್ಬರಾಯ ಗಮದ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು,

ಪೊಲೀಸ್ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ಮಾಡಿ ಓಡಿ ಹೋಗುವ ಸಂದರ್ಭದಲ್ಲಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆತನ ಮೇಲೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಮುಜಾಮಿಲ್ ಕಾಲಿಗೆ ಗುಂಡು ತಗಲಿದೆ, ಗಾಯಗೊಂಡ ಆರೋಪಿಯನ್ನು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕಿಮ್ಸ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.ಎಕ್ಸ್ ಕ್ಲ್ಯೂಸಿವ್…ಕಂಪ್ಲೀಟ್ ಸ್ಟೋರಿ ಬಿಗ್ ಟಿವಿಯಲ್ಲಿ ಮಾತ್ರ…..

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *