Breaking News

ವಿಷ ಸೇವಿಸಿ, ಮಹಿಳೆ ಹಾಗೂ ಅವಿವಾಹಿತ ಯುವಕ ಸಾವು!!

ಪತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಸುಜಾತಾ ಒಬ್ಬಂಟಿಯಾಗಿ ತಮ್ಮಡಿಕೊಪ್ಪದಲ್ಲಿ ವಾಸವಾಗಿದ್ದರು. ಈ ನಡುವೆ ಟೈಲ್ಸ್ ಕೆಲಸ ಮಾಡುವ ಸಚಿನ್ ಹಾಗೂ ಸುಜಾತಾ ನಡುವೆ ಗೆಳೆತನ ಬೆಳೆದಿದೆ. ಗೆಳೆತನದ ಹಿನ್ನೆಲೆಯಲ್ಲಿ ಸಚಿನ್ ಆಗಾಗ್ಗೆ ಸುಜಾತಾ ಅವರ ಮನೆಗೆ ಬಂದು ಹೋಗುತ್ತಿದ್ದರು. ಸಚಿನ್​ ಕಳೆದೊಂದು ವಾರದಿಂದ ಸುಜಾತ ಅವರ ಮನೆಯಲ್ಲಿ ನೆಲೆಸಿದ್ದರು.ಈ ವಿಚಾರವಾಗಿ ಸುಜಾತ ಸಹೋದರಿ ಪ್ರಶ್ನಿಸಿದ್ದರು. ತಮ್ಮ ಗೆಳೆತನ ಬಹಿರಂಗಗೊಂಡಿದ್ದಕ್ಕೆ ವಿಚಲಿತರಾಗಿದ್ದ ಸುಜಾತಾ ಹಾಗೂ ಸಚಿನ್ ಗಾಬರಿಗೊಂಡು, ಒಟ್ಟಿಗೆ ವಿಷ ಸೇವಿಸಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ರಿಪ್ಪನ್ ಪೇಟೆ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.

Share News

About BigTv News

Check Also

ರಾಜಕೀಯ ಮರೆತು ಮಾನವೀಯತೆ ಮೆರೆದ ಕ್ಷಣ: ಚೆನ್ನಮ್ಮ ಅಂತಿಮ ದರ್ಶನದ ವೇಳೆ ದೇವೇಗೌಡರ ಕೈಹಿಡಿದು ಸಿದ್ದರಾಮಯ್ಯ ಸಾಂತ್ವನ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ …

Leave a Reply

Your email address will not be published. Required fields are marked *