ಸರೋಜಮ್ಮ ಅವರು ಹೃದಯಘಾತದಿಂದ ಗುರುವಾರ ಬೆಳಗ್ಗೆ ಮೃತಪಟ್ಟಿದ್ದರು. ಪತ್ನಿಯ ಮೃತ ದೇಹದ ಜತೆಯಲ್ಲೇ ಇದ್ದು ರೋದಿಸುತ್ತಿದ್ದ ಪತಿ ರತ್ನಾಕರಯ್ಯ ಅವರ ಆರೋಗ್ಯ ಸ್ಥಿತಿ ಕ್ಷೀಣಿಸ ತೊಡಗಿತು. ಮನೆಯವರು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಂದ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಿಸದೆ ಪತ್ನಿ ಗತಿಸಿದ ನಾಲ್ಕು ಗಂಟೆಯ ಅಂತರದಲ್ಲಿ ಅವರು ಮೃ*ತಪಟ್ಟರು.ಮೃತ ದಂಪತಿ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ರತ್ನಾಕರಯ್ಯ ಅವರು ಹಿರಿಯ ಆರೋಗ್ಯ ನಿರೀಕ್ಷಕರಾಗಿ ಹಿರಿಯಡ್ಕ, ಬಾಕೂìರು, ಕೊಲ್ಲೂರು, ಕೋಟ ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿಸಿ ಉತ್ತಮ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

