18 ವರ್ಷಗಳ ಕನಸು ಇಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಾವಳಿ ಎಲ್ಲೆಡೆ ಸಂಭ್ರಮ ನಡೆಯುತ್ತಿದ್ದು, ಪಂಜಾಬ್ ವಿರುದ್ಧ RCB ಫೈನಲ್ ಗೆ ತಲುಪಿದ್ದು ಎಲ್ಲೆಡೆ RCB ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ ಪೂಜೆ,ಕಟೌಟ್, ಪಟಾಕಿ ಹೀಗೆ ವಿವಿಧ ರೀತಿಯಲ್ಲಿ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಹಾಗೆ ಆರ್ಸಿಬಿ ಅಭಿಮಾನಿಗಳು ಇಂದು ಬೆಳಗ್ಗೆ ಶ್ರೀ ಸಿದ್ದಾರೂಢ ಸ್ವಾಮಿ ಮಠದಲ್ಲಿ ಅಭಿಷೇಕ ಮಾಡಿಸುವ ಮೂಲಕ ಆರ್‌ಸಿಬಿ ಗೆಲ್ಲಲಿ ಎಂದು ಹರಸಿ ಹಾರೈಸಿದ್ದಾರೆ. ಸತತ 18 ವರ್ಷಗಳ ತಪಸ್ಸು ಇಂದು ಈಡೇರುವ ಹಂಬಲ ಎಲ್ಲರಲ್ಲೂ ಇದೆ. BIG TV ನ್ಯೂಸ್ ಮೂಲಕ ಆರ್‌ಸಿಬಿ ಗೆಲ್ಲಲಿ ಎಂದು ಹರಿಸುತ್ತೇವೆ. ” ಜೈRCB “.
bigtvnews | Hubli Dharwad News | Kannada News | Karnataka News Hubli News | News In Hubli | Local news

