Breaking News

ಗಂಡನಿಗೆ ಚಪ್ಪಲಿಯಿಂದ ಹೊಡೆದ ಪತ್ನಿ!!

ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಎರಡನೇ ಮದುವೆಗೆ ಸಿದ್ಧವಾಗಿದ್ದ ವರನಿಗೆ ಮೊದಲ ಪತ್ನಿ ಮದುವೆ ಮಂಟಪದಲ್ಲೇ ಚಪ್ಪಲಿಯಿಂದ ಏಟು ಕೊಟ್ಟ ಘಟನೆ ನಡೆದಿದೆ. ಆರೋಪಿ ಕಾರ್ತಿಕ್ ನಾಯ್ಕ್, ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆ ತಾಲೂಕಿನ ತಿಪ್ಪಘಟ್ಟದವನು, ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ ತನುಜಾ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ, ಈ ಮದುವೆಯನ್ನು ಮರೆಮಾಚಿ ಕಾರ್ತಿಕ್ ಚಿತ್ರದುರ್ಗದಲ್ಲಿ ಎರಡನೇ ಮದುವೆಗೆ ರಹಸ್ಯ ಯೋಜನೆ ರೂಪಿಸಿದ್ದ. ವರದಕ್ಷಿಣೆಯ ಆಸೆಯಿಂದ ಈ ಕೃತ್ಯಕ್ಕೆ ಕೈಹಾಕಿದ್ದ ಎಂದು ಮಾಹಿತಿಗಳು ತಿಳಿಸಿವೆ.ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯ ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *