ಪೊಲೀಸರ ಪ್ರಕಾರ, ನಿತ್ಯಾ ನಾಪತ್ತೆಯಾದಾಗಿನಿಂದ ಅನುಮಾನಾಸ್ಪದ ವರ್ತನೆ ತೋರಿದ್ದ ಜೋಗೇಂದ್ರ, ವಿವಿಧ ನೆಪಗಳನ್ನು ಮುಂದೊಡ್ಡಿ, ಶೋಧ ಕಾರ್ಯಾಚರಣೆಯಿಂದ ಅಂತರ ಕಾಯ್ದುಕೊಂಡಿದ್ದ ಎಂದು ಹೇಳಲಾಗಿದೆ. ನಂತರ, ರವಿವಾರ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದ ಆತ, ಇಲ್ಲಿಯವರೆಗೆ ಕಂಡು ಬಂದಿಲ್ಲ ಎನ್ನಲಾಗಿದೆ.ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶ್ರೀ ವಾಸ್ತವ, “ಆತ ದಿಢೀರನೆ ಕಾಣೆಯಾಗಿರುವುದು ಹಲವು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ನಾವೀಗ ಇದನ್ನು ಅವಳಿ ನಾಪತ್ತೆ ಪ್ರಕರಣ ಎಂದು ಪರಿಗಣಿಸಿದ್ದು, ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

