Breaking News

ತಾಲ್ಲೂಕಿನ ಹಲವೆಡೆಗೆ ಧಾರವಾಡ ಜಿಲ್ಲಾಧಿಕಾರಿ ಭೇಟಿ



ನವಲಗುಂದ : ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಭೇಟಿ ನೀಡಿ , ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಹಲವು ಕಾಮಗಾರಿಗಳ ಪರಿಶೀಲನೆ ನಡೆಸಿದರು . ತಾಲ್ಲೂಕಿನ ಕಾಲವಾಡ ಗ್ರಾಮದ ಸರಕಾರಿ ಶಾಲೆ ಒತ್ತುವರಿ ಜಾಗೆ ಪರಿಶೀಲನೆ ನಡೆಸಿ , ಆರೇಕುರಹಟ್ಟಿ ಗ್ರಾಮದ ಮಲೀನವಾಗಿರುವ ಕೆರೆ ವೀಕ್ಷಿಸಿ , ಸಂಬಂಧಪಟ್ಟ ಅಧಿಕಾರಿಗಳಿಗೆ ಕೆರೆಯನ್ನು ಸ್ವಚ್ಛಗೊಳಿಸಲು ನಿರ್ದೇಶನ ನೀಡಿದರು . ನಂತರ ಮನೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಚೆಕ್ ವಿತರಿಸಿದ ಕುರಿತು ಪರಿಶೀಲಿಸಿದರು . ತದನಂತರ ನವಲಗುಂದ ಪಟ್ಟಣದ ನೀಲಮ್ಮನ ಕೆರೆ ಹೂಳೆತ್ತುವ ಕಾರ್ಯ ವೀಕ್ಷಣೆ ಮಾಡಿದ ಅವರು , ತಾಲೂಕು ಸರಕಾರಿ ಆಸ್ಪತ್ರೆ , ಪುರಸಭೆ ವ್ಯಾಪ್ತಿಯ ಘನ ತ್ಯಾಜ್ಯ ವಿಲೆ ಾರಿ ಘಟಕ ವೀಕ್ಷಣೆ ಮಾಡಿದರು ನಂತರ ತಹಶೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿ , ಶಿಕ್ಷಕರ ಮತ ಕ್ಷೇತ್ರದ ಮತಗಟ್ಟೆ ಸಂಖ್ಯೆ -35 ಕ್ಕೆ ಒದಗಿಸಿರುವ ಮೂಲಭೂತ ಸೌಕರ್ಯವನ್ನು ವೀಕ್ಷಿಸಿದರು .

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *