ಬುಧವಾರ ಸುರಿದ ಮಳೆ ಮತ್ತು ಬಿರುಗಾಳಿಯಿಂದ ಬೇವಿನ ಮರದ ಬೇರು ಸಡಿಲಗೊಂಡಿತ್ತು. ಹಾಗಾಗಿ ಗುರುವಾರ ಮಳೆಯಾಗದಿದ್ದರೂ, ಏಕಾಏಕಿಯಾಗಿ ಮರ ಬಿದ್ದಿದ್ದರಿಂದ ವಾಹನ ಸಂಪೂರ್ಣ ಹಾಳಾಗಿದೆ. ಕೆಲವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ, ಉಳಿದವರನ್ನು ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ್ದ ವಲಯ ಅರಣ್ಯಾಧಿಕಾರಿ ಭಾಗ್ಯಶ್ರಿ ಮಸಳಿ ಅವರನ್ನು ಗಾಯಾಳು ಕುಟುಂಬದವರು ತರಾಟೆಗೆ ತೆಗೆದುಕೊಂಡರು.ಮದುವೆಗೆಂದು ವಧು ಮತ್ತು ಸಂಬಂಧಿಕರನ್ನು ಹೊತ್ತು ಬರುತ್ತಿದ್ದ ಕ್ರೂಸರ್ ವಾಹನ ಮೇಲೆ ಮರ ಉರುಳಿ ಬಿದ್ದು ವಧು ಸೇರಿದಂತೆ 12 ಜನರು ಗಾಯಗೊಂಡ ಘಟನೆ ತಾಲ್ಲೂಕಿನ ದೊಡಮಂಗಡಿ ಬಳಿ ಗುರುವಾರ ರಾತ್ರಿ ನಡೆದಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

