Breaking News

ಹನೂರು :ಗಾಂಜಾ ಸಾಗಾಣೆ; ಓರ್ವನ ಬಂಧನ!

ದಂಟಳ್ಳಿ ಗ್ರಾಮದ ನಾಗರಾಜು ಅಲಿಯಾಸ್ ಕಿವುಡ ಬಂಧಿತ. ಆರೋಪಿ ರಾತ್ರಿ 7.45ರಲ್ಲಿ ತಾಲೂಕಿನ ಚೆಂಗವಾಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಸಾಗಾಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಹನೂರು ಪೊಲೀಸರು, ಇನ್ಸ್ಪೆಕ್ಟರ್ ಆನಂದಮೂರ್ತಿ ಮಾರ್ಗದರ್ಶನದಲ್ಲಿ ಸಿಪಿಐ ಮಂಜುನಾಥ್ ಪ್ರಸಾದ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ.ಹೊಸೂರು ಎ ವಿಲೇಜ್ ನ ನಾಗು ಅಲಿಯಾಸ್ ಹಾಲು ನಾಗ ಗಾಂಜಾವನ್ನು ನೀಡಿರುವುದಾಗಿ ಮಾಹಿತಿ ನೀಡಿದ್ದಾನೆ. ಬಂಧಿತನಿಂದ ಹೂ ಗೊಂಡೆ ಬೀಜ ಮಿಶ್ರಿತ ಒಣಗಿಸಿ ಹದ ಮಾಡಿದ 4 ಕೆ.ಜಿ.725 ಗ್ರಾಂ. ಅಂದಾಜು 2 ಲಕ್ಷ ರೂ.ಗಳ ಗಾಂಜಾವನ್ನು ವಶಕ್ಕೆ ಪಡೆದು ಮತ್ತೊರ್ವ ಆರೋಪಿ ನಾಗು ಅಲಿಯಾಸ್ ಹಾಲು ನಾಗನ ಮೇಲೂ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Share News

About BigTv News

Check Also

ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …

Leave a Reply

Your email address will not be published. Required fields are marked *