Breaking News

ಹುಬ್ಬಳ್ಳಿ :ಕೋಟ್ಯಾಂತರ ರೂಪಾಯಿ ಮೌಲ್ಯದ ಖೋಟಾ ನೋಟು ಜಾಲ ಪತ್ತೆ ಮಾಡಿದ ಸಿಸಿಬಿ ತಂಡ!!

ಹುಬ್ಬಳ್ಳಿಯಲ್ಲಿ ಖೋಟಾನೋಟು ಜಾಲ ಪತ್ತೆ

1ಕೋಟಿ 87 ಲಕ್ಷ 45 ಸಾವಿರ ರೂಪಾಯಿಗಳಲ್ಲಿ 5 ಸಾವಿರ ರೂ ಅಷ್ಟೆ ಅಸಲಿ ನೋಟು..

ಸಿಸಿಬಿ ಪೊಲೀಸರ ಕೈಗೆ ಸಿಕ್ಕ ಕತರ್ನಾಕ್ ಕಳ್ಳ ಆಸೀಫ್.

ತಮಿಳುನಾಡಿನಲ್ಲಿ ನಕಲಿ ನೋಟಿನ ಮುದ್ರಣ ಕರ್ನಾಟಕದಲ್ಲಿ ಚಲಾವಣೆ

ಪೂನಾ ಮೂಲದ ಅಶ್ವಿನಿ ಎಂಬುವವರಿಗೆ ಮೋಸ ಮಾಡಿದ್ದ ಕತರ್ನಾಕ್ ಆರೋಪಿಗಳು,ಅಶ್ವಿನಿ ಅವರಿಗೆ 50 ಕೋಟಿ ಕೊಡಿಸುವ ಆಸೆ ತೋರಿಸಿದ್ದ ಮೊಹಮ್ಮದ್ ಆಸೀಫ್ 50 ಕೋಟಿಗೆ ಪ್ರೊಸೆಸಿಂಗ್ ಫೀ ಅಂತ ಅಶ್ವಿನಿ ಬಳಿ 60 ಲಕ್ಷ ಹಣ ಪಡೆದಿದ್ದರು.ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಲೋನ್ ಮೊದಲ ಭಾಗ ಅಂತ 1 ಕೋಟಿ 87 ಲಕ್ಷ 45 ಸಾವಿರ ಹಣವನ್ನು ಅಶ್ವಿನಿಗೆ ನೀಡಿದ್ದ ಮೊಹಮ್ಮದ್,ಬಳಿಕ ಹಣ ಎಣಿಕೆ ಮಾಡುವಾಗ ನಕಲಿ ನೋಟು ಇರುವುದು ಪತ್ತೆಯಾಗಿದೆ.

https://www.facebook.com/share/v/1B6ZtGWYHW/?mibextid=D5vuiz

ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈ ತಿಂಗಳ 5 ರಂದು ಪ್ರಕರಣ ದಾಖಲಾಗಿತ್ತು.ಈ ಹಿಂದೆಯೂ 2017- 18 ನಕಲಿ ನೋಟು ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಮೊಹಮ್ಮದ್,ಸುಧೀರ್ ಮೆಹ್ತಾ ಅಂತ ಹೆಸರು ಬದಲಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾನೆ.ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಭೇದಿಸಿದ ಪೊಲೀಸರು,ಆರೋಪಿ ಬೆನ್ನುಹತ್ತಿ ಮುರುಡೇಶ್ವರದಲ್ಲಿ ಬಂಧನ ಮಾಡಿದ್ದಾರೆ.ಸದ್ಯ ಆರೋಪಿ ಮೊಹಮ್ಮದ್‌ ಆಸೀಪ್ ನನ್ನ ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರು, ತಮಿಳು ನಾಡಿನ ಪ್ರಿಂಟಿಂಗ್ ಪ್ರೆಸ್ ನಲ್ಲಿ ನೋಟು ಮುದ್ರಣ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ. ಆರೋಪಿನಿಂದ 1 ಕೋಟಿ 87 ಲಕ್ಷ 40 ಸಾವಿರ ನಕಲಿ ನೋಟಿನೊಂದಿದೆ ಒಂದು ಫೋರ್ಡ್ ಇಕೋಸ್ಪೋರ್ಟ್ ಕಾರು ವಶ ಪಡಿಸಿಕೊಂಡಿದ್ದಾರೆ

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *